ಗದಗ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಇದರಿಂದ ಅನೇಕ ಕಡೆ ಅವಾಂತರಗಳು ಸೃಷ್ಟಿಯಾಗುತ್ತಿದೆ. ಗದಗದಲ್ಲೂ ಕೂಡ ಮಳೆಯ ಅಬ್ಬರಕ್ಕೆ ಪ್ರಸಿದ್ಧ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿದು ಬಿದ್ದಿದೆ.
BIGG NEWS: ಶಿವಮೊಗ್ಗದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ; ನಿಟ್ಟುಸಿರುಬಿಟ್ಟ ಜನರು
ನಿನ್ನೆರಾತ್ರಿ ಸುರಿದ ಮಳೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಇದರಿಂದಾಗಿ ಈಶ್ವರನ ಮೂರ್ತಿ ಮುಚ್ಚಿಹೋಗಿದೆ. ಕಳೆದ ಕೆಲ ದಿನದಿಂದ ಈ ದೇವಸ್ಥಾನದ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಆದ್ರೆ ಸತತ ಮಳೆಯಿಂದ ಗೋಡೆ ಕುಸಿದು ದೇವಸ್ಥಾನ ವಿರೂಪಗೊಂಡಿದೆ. ಇದೀಗ ಸ್ಥಳಕ್ಕೆ ಡಿಸಿ ವೈಶಾಲಿ ಎಂಎಲ್, ಪುರಸಭೆ ಅಧ್ಯಕ್ಷೆ ಅಶ್ವಿನಿ ಎ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.