ಲಖನೌ: ನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಲುಲು ಮಾಲ್ನಲ್ಲಿ ಜನರು ನಮಾಜ್ ಮಾಡುವ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಚಾರವಾಗಿ ವಿವಾದ ಭುಗಿಲೆದ್ದಿದೆ.
BIGG NEWS: ಹಾವೇರಿಯಲ್ಲಿ ಭಾರಿ ಮಳೆ; ನದಿಗಳಿಗೆ ಹೋಗದಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ
ಇದೀಗ ಹಿಂದೂ ಮಹಾಸಭಾ ಕಾರ್ಯಕರ್ತರಿಂದ ಮಾಲ್ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಸರಿ ಬಾವುಟಗಳನ್ನು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸುತ್ತಮುತ್ತ ಭಾರಿ ಪೊಲೀಸ್ ನಿಯೋಜಿಸಿದ್ದು, ಮಲ್ ಆವರಣದ ಹೊರಗೆ ಬ್ಯಾರಿಕೇಡ್ ಗಳನ್ನು ಹಾಕಲಾಯಿತು. .
ಲುಲು ಮಾಲ್ನ ಪ್ರವೇಶ ದ್ವಾರದ ಹೊರಗೆ ಸುಂದರ್ ಕಂಡ್ ಪಠಿಸಿದ್ದಕ್ಕಾಗಿ ನಾಲ್ವರನ್ನು ಬಂಧಿಸಿದ್ದಾರೆ. ಸೆಕ್ಷನ್ ೧೪೪ ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಇತ್ತೀಚೆಗೆ ತೆರೆಯಲಾದ ಮಾಲ್ ಒಳಗೆ ಪುರುಷರ ಗುಂಪೊಂದು ನಮಾಜ್ ಮಾಡುತ್ತಿರುವ ವೈರಲ್ ವೀಡಿಯೊವನ್ನು ನೋಡಿದ ನಂತರ ಅಖಿಲ ಭಾರತ ಹಿಂದೂ ಮಹಾಸಭಾ ಪ್ರತಿಭಟನೆ ನಡೆಸುತ್ತಿದೆ. ಮಾಲ್ ಬಳಿ ಹನುಮಾನ್ ಚಾಲೀಸಾ ಪಠಿಸಲು ಬಲಪಂಥೀಯ ಸಂಘಟನೆ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಕೋರಿತ್ತು, ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು.
BIGG NEWS: ಹಾವೇರಿಯಲ್ಲಿ ಭಾರಿ ಮಳೆ; ನದಿಗಳಿಗೆ ಹೋಗದಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ
ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ, “ಜನರು ಲುಲು ಮಾಲ್ನಲ್ಲಿ ನೆಲದ ಮೇಲೆ ಕುಳಿತು ನಮಾಜ್ ಮಾಡಿದರು, ಈ ವೀಡಿಯೊ ಮಾಲ್ನಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಸಾಬೀತುಪಡಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ನಿರ್ದೇಶನ ನೀಡಿದೆ.