ನವದೆಹಲಿ: ಭಾರತೀಯ ಚುನಾವಣಾ ಆಯೋಗ (Election Commission of India – ECI) ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರ ( Himachal Pradesh Assembly election 2022 ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರ ಮತದಾನವನ್ನು ನವೆಂಬರ್ 12 ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ ಚಲಾವಣೆಯಾದ ಮತಏಣಿಕೆ ಕಾರ್ಯ ಡಿಸೆಂಬರ್ 8 ರಂದು ನಡೆದು, ಫಲಿತಾಂಶ ಘೋಷಣೆ ಮಾಡಲಿದೆ.
ಈ ವರ್ಷದ ಅಂತ್ಯದ ವೇಳೆಗೆ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಘೋಷಿಸಿಲ್ಲ. “ಸಂಪ್ರದಾಯ, ಅರ್ಹತಾ ದಿನಾಂಕಗಳಲ್ಲಿನ ಅಂತರ ಮತ್ತು ಹವಾಮಾನ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಗಿದೆ” ಎಂದು ಚುನಾವಣಾ ಆಯೋಗ ಹೇಳಿದೆ.
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ ನಾಮಪತ್ರ ಸಲ್ಲಿಕೆಯು ಅಕ್ಟೋಬರ್ 17 ರಂದು ಪ್ರಾರಂಭವಾಗುತ್ತದೆ. ಅಕ್ಟೋಬರ್ 25 ರವರೆಗೆ ಮುಂದುವರಿಯುತ್ತದೆ. ಅಭ್ಯರ್ಥಿಗಳು ಅಕ್ಟೋಬರ್ 29 ರವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಗುಜರಾತ್ ವಿಧಾನಸಭೆಯ ಅವಧಿ 18 ಫೆಬ್ರವರಿ 2023 ರಂದು ಕೊನೆಗೊಳ್ಳಲಿದ್ದು, ಹಿಮಾಚಲ ಸದನದ ಅವಧಿ 2023 ರ ಜನವರಿ 8 ರಂದು ಕೊನೆಗೊಳ್ಳಲಿದೆ.
BREAKING NEWS: ಓಲಾ, ಊಬರ್ಗೆ ಬಿಗ್ ರಿಲೀಫ್; ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಆಯೋಗವು ಒಟ್ಟು 7,881 ಮತಗಟ್ಟೆಗಳಿವೆ, ಇದರಲ್ಲಿ 142 ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡುತ್ತವೆ. 37 ಅಂಗವಿಕಲರು ನಿರ್ವಹಿಸುತ್ತಾರೆ ಎಂದು ಹೇಳಿದೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ 55 ಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 1.86 ಲಕ್ಷ ಮೊದಲ ಬಾರಿಗೆ ಮತದಾರರು, 80 ವರ್ಷಕ್ಕಿಂತ ಮೇಲ್ಪಟ್ಟ 1.22 ಲಕ್ಷ ಮತದಾರರು.