ಮಂಗಳೂರು: ರಾಜ್ಯದಲ್ಲಿ ಮತ್ತೆ ‘ಭುಗಿಲೆದ್ದ ಹಿಜಾಬ್’ ವಿವಾದ ಶುರುವಾಗಿದ್ದು, ಬುರ್ಖಾಗೆ ಅವಕಾಶವಿಲ್ಲದ ಕಾಲೇಜಿನಿಂದ ಶೇ.16 ರಷ್ಟು ವಿದ್ಯಾರ್ಥಿನಿಯರು ʻ ಟಿಸಿ ವಾಪಾಸ್ ಪಡೆದ ಘಟನೆ ಬೆಳಕಿಗೆ ಬಂದಿದೆ
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?
ಪರೀಕ್ಷೆಗಳಿಗೆ ಹಿಜಬ್ ಧರಿಸಲು ಅವಕಾಶವಿಲ್ಲ ಎಂದಿದ್ದಕ್ಕೆ ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದರು. ಇದೀಗ ಹಿಜಬ್ ಸಮರ ಮತ್ತೆ ಮುಂದುವರಿದಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶೇ.16 ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿಯನ್ನು ಹಿಂಪಡೆದಿದ್ದಾರೆ.
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಮಾತನಾಡಿ, ಟಿಸಿ ಪಡೆಯಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ 900 ವಿದ್ಯಾರ್ಥಿನಿಯರ ಪೈಕಿ 145 ಮಂದಿ ಟಿಸಿಯನ್ನು ಹಿಂಪಡೆದಿದ್ದಾರೆ. ಅದರಲ್ಲಿ ಸರ್ಕಾರಿ ಕಾಲೇಜಿನ 34%, ಅನುದಾನಿತ ಕಾಲೇಜಿನ 13% ವಿದ್ಯಾರ್ಥಿನಿಯರಿದ್ದಾರೆ
ಹಿಜಬ್ ಧರಿಸಲು ಅವಕಾಶ ಇಲ್ಲದ ಕಾರಣ ಮಂಗಳೂರಿನ ಹಿಜಬ್ ಹೋರಾಟಗಾರ್ತಿ ಗೌಸಿಯಾ ಕಾಲೇಜಿನಿಂದ ಟಿಸಿ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿ, ವಿದ್ಯಾರ್ಥಿನಿಯರು ಟಿಸಿ ಪಡೆಯಲು ಸಚಿವ ಬಿ.ಸಿ ನಾಗೇಶ್ ಅವರೇ ಮುಖ್ಯ ಕಾರಣರಾಗಿದ್ದಾರೆ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ.
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?
ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?