ಮಂಡ್ಯ: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.ಜಿಲ್ಲೆಯಲ್ಲಿ PFI ಕಾರ್ಯಕರ್ತರು ಪೂರ್ವ ಪೊಲೀಸ್ ಠಾಣೆ ಎದುರು ಹೈಡ್ರಾಮಾ ಮಾಡಿದ್ದಾರೆ.
ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, PFI ಜಿಲ್ಲಾಧ್ಯಕ್ಷ ಇರ್ಫಾನ್ ಬಂಧಿಸಲಾಗಿತ್ತು. ಇದನ್ನ ಖಂಡಿಸಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ನೋಟಿಸ್ ಕೊಡದೆ ಏಕಾಏಕಿ ಬಂಧಿಸಿದ್ದಾರೆ. ನಮ್ಮ ಸಂಘಟನೆಯನ್ನೇ ಅವು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ರತಿಭಟನೆ ವೇಳೆ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಈ ಬೆನ್ನಲ್ಲೇ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಖಾಕಿ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಡೈರಿವೊಂದು ಪತ್ತೆಯಾಗಿದ್ದು. ಆ ಡೈರಿಯಲ್ಲಿ ́TRAINING TO BE ORGANZED́ ಎಂದು ಬರಹ ಪತ್ತೆಯಾಗಿದೆ. ಆದರೇ ಅದರಲ್ಲಿ ದಿನಾಂಕ ಹಾಗೂ ತಾರೀಕುಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ ಮತ್ತಷ್ಟು ಆತಂಕ್ಕೆ ಕಾರಣವಾಗಿದಂತೂ ಸತ್ಯವಾಗಿದೆ.