ಧಾರವಾಡ: ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ 9 ನೇ ತರಗತಿಯಿಂದಲೇ ಮಕ್ಕಳಿಗೆ ಪೋಕ್ಸೋ ಕಾಯಿದೆಗಳ ಶಿಕ್ಷಣದ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.
ಹದಿಹರೆಯದವರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆ 9 ನೇ ತರಗತಿಯಿಂದಲೇ ಪೋಕ್ಸೋ ಕಾಯಿದೆಗಳ ಶಿಕ್ಷಣದ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆಗೆ ಧಾರವಾಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ. ಸಮಿತಿ ರಚಿಸಿ ಪಠ್ಯ ರೂಪಿಸುವಂತೆ ಹೈಕೋರ್ಟ್ ಪೀಠ ಸೂಚನೆ ನಿಡಿದೆ.
16-18 ವರ್ಷದೊಳಗಿನವರ ಪ್ರೀತಿ-ಸಂಬಂಧಗಳನ್ನು ಕಾನೂನು ಪರಿಗಣಿಸುವುದಿಲ್ಲ , ಇದು ಇತ್ತೀಚೆಗೆ ಹೆ್ಚ್ಚಾಗುತ್ತಿದೆ. ಹದಿಹರೆಯವರು ಪ್ರೀತಿಸಿ ಮದುವೆಯಾದ ಪ್ರಕರಣಗಳು ಇದೆ. ಆದ್ದರಿಂದ ಕಾನೂನು ಆಯೋಗ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ, ಜಿ ಬಸವರಾಜ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಇನ್ನೂ, ನ್ಯಾಯಾಲಯದ ಈ ನಿರ್ದೇಶನದ ಹಿನ್ನೆಲೆ ಸರ್ಕಾರ ಎಷ್ಟು ಬೇಗ ಕ್ರಮ ಕೈಗೊಳ್ಳಲಿದೆ. ಸಮಿತಿ ರಚಿಸಿ ಪಠ್ಯ ರೂಪಿಸುವ ವಿಚಾರಕ್ಕೆ ಎಷ್ಟು ಬೇಗ ರಿಯಾಕ್ಟ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
BIGG NEWS : 4ನೇ ಮಹಡಿಯಿಂದ ಮಗು ಎಸೆದ ಕೇಸ್ : ಚಾರ್ಜ್ ಶೀಟ್ನಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಓದಿ
BIGG NEWS : 23.73 ಕೋಟಿ ರೂ. ವಂಚನೆ ಆರೋಪ : ‘Nexxoft Infotel’ ಕಂಪನಿ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ E.D