ಬೆಂಗಳೂರು: ನಿನ್ನೆ ತನ್ನ ಕಷ್ಟವನ್ನು ಹೇಳಿಕೊಳ್ಳಲು ಆಗಮಿಸಿದಂತ ಮಹಿಳೆಯೊಬ್ಬರಿಗೆ, ವಸತಿ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಈ ಬಳಿಕ ಮಹಿಳೆಯ ಕ್ಷಮೆ ಕೇಳಿದಂತ ಘಟನೆ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಸಚಿವ ವಿ.ಸೋಮಣ್ಣ ( Minister V Somanna ) ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ( BJP High command ) ಸೂಚಿಸಿದೆ ಎನ್ನಲಾಗುತ್ತಿದೆ.
Firecrackers Safety Tips: ನಿಮ್ಮ ‘ದೀಪಾವಳಿ ಸಂಭ್ರಮ’ದಲ್ಲಿ ತಪ್ಪದೇ ಈ ‘ಸುರಕ್ಷತಾ ಕ್ರಮ’ ಅನುಸರಿಸಿ
ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಚಾಮರಾಜನಗರದಲ್ಲಿ ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳಿದಂತ ಸಂದರ್ಭದಲ್ಲಿ, ಪರಿಶಿಷ್ಟ ಮಹಿಳೆಯೊಬ್ಬರು ತಮಗೆ ನಿವೇಶನ ಹಂಚಿಕೆ ಆಗಿಲ್ಲ. ದಯವಿಟ್ಟು ಕೊಡಿಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದರು. ಅಲ್ಲದೇ ಸಚಿವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದರು.
ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಲಿಲ್ಲ ಆದರೆ ಕೆಣಕಿದ್ರೆ ಸರಿ ಇರೋದಿಲ್ಲ : ಪ್ರಧಾನಿ ಮೋದಿ
ಮಹಿಳೆಯ ವರ್ತನೆಯಿಂದ ಸಿಡಿಮಿಡಿಗೊಂಡಂತ ವಸತಿ ಸಚಿವ ವಿ.ಸೋಮಣ್ಣ ಅವರು ದಿಢೀರ್ ಮಹಿಳೆಯ ಕೆನ್ನೆಗೆ ಬಾರಿಸಿ ಕಪಾಳ ಮೋಕ್ಷ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಪಕ್ಷಗಳ ನಾಯಕರು ಸೇರಿದಂತೆ ಸಾರ್ವಜನಿಕರು ಸಚಿವರ ಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು.
ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಲಿಲ್ಲ ಆದರೆ ಕೆಣಕಿದ್ರೆ ಸರಿ ಇರೋದಿಲ್ಲ : ಪ್ರಧಾನಿ ಮೋದಿ
ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳ ಮೋಕ್ಷ ಮಾಡಿದಂತ ವೀಡಿಯೋ ವೈರಲ್ ಆಗುತ್ತಿದ್ದಂತೇ, ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವಂತ ಬಿಜೆಪಿ ಹೈಕಮಾಂಡ್, ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ವಿ.ಸೋಮಣ್ಣ ಅವರಿಗೆ ಸೂಚಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಆದ್ರೇ ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರು ಯಾವ ನಡೆಯನ್ನು ತೋರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.