Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

ಹರಡುತ್ತಿದೆ ಹಂತಾವೈರಸ್ ಭೀತಿ: ದೇಶಾದ್ಯಂತ ಹದ್ದಿನ ಕಣ್ಣಿಟ್ಟ ಭಾರತೀಯ ಆರೋಗ್ಯ ಸಂಸ್ಥೆಗಳು

​ಭಾರತದ ಪತ್ರಿಕಾಗೋಷ್ಠಿ ನೋಡಿ ಪಾಕಿಸ್ತಾನಕ್ಕೆ ಹೊಟ್ಟೆ ಉರಿ! ‘ಇಂಗ್ಲಿಷ್‌ನಲ್ಲಿ ಯಾಕೆ ಮಾತಾಡ್ತೀರಾ?’ ಎಂದು ಕಿರಿಕ್ ಮಾಡಿದ ನೆರೆರಾಷ್ಟ್ರ | Watch video

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’
KARNATAKA

ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’

By kannadanewsnow09

ಬೆಂಗಳೂರು: ಕೆ ಎಸ್ ಆರ್ ಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಹಲವು ಬಗೆಯ ಬಸ್ಸುಗಳನ್ನು ರೋಡಿಗೆ ಇಳಿಸಲಾಗಿದೆ. ಈಗ ಪ್ರಯಾಣಕರಿಗೆ ಹೈಫೈ ಪ್ರಯಾಣದ ಟಚ್ ನೀಡೋದಕ್ಕೆ ಬಸ್ ಸಿದ್ದವಾಗಿದ್ದಾವೆ. ಆ ಬಸ್ಸುಗಳನ್ನು ಇಂದು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು.

ಹೌದು.. ಹೊಸ 9600 VOLVO Multiaxle ಸೀಟರ್ ಪ್ರೋಟೋಟೈಪ್ ಬಸ್ಸನ್ನು ಇಂದು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಕೆ ಎಸ್ ಆರ್ ಟಿ ಸಿ ಕೇಂದ್ರ‌ ಕಛೇರಿಯಲ್ಲಿ ಪರಿವೀಕ್ಷಣೆ ನಡೆಸಿದರು.

ಈ ಬಸ್ಸಿನ ವಿಶೇಷತೆಗಳು:
*ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಹೊಸ‌ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿರುವುದರಿಂದ ಕಣ್ ತಣಿಸುವ ಸೌಂದರ್ಯ.

*ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ.

*ನವೀನ ತಂತ್ರಜ್ಙಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್‌ ಕೆಎಂಪಿಎಲ್ ನೀಡುತ್ತದೆ.

*ಒಟ್ಟಾರೆ ಬಸ್ಸಿನ ಉದ್ದದಲ್ಲಿ 3.5% ಹೆಚ್ಚಳ ಇರುವುದರಿಂದ ಸಲೂನ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ.

*ಒಟ್ಟಾರೆ ಬಸ್ಸಿನ ಎತ್ತರದಲ್ಲಿ 5.6% ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್‌ ರೂಂ ಇರುತ್ತದೆ.

*ವಿಂಡ್‌ಶೀಲ್ಡ್ ಗಾಜು 9.5% ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.

*ವಿಶಾಲ ಲಗೇಜ್ ಸ್ಥಳಾವಕಾಶವಿದ್ದು ಶೇ 20% ರಷ್ಟು ಹೆಚ್ಚಿನ ಲಗ್ಗೇಜ್ ಇಡುವ ಸೌಲಭ್ಯವಿರುತ್ತದೆ.

*USB + C ಟೈಪ್ ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ.

*ವಿಶಾಲವಾದ ಎಸಿ ಡಕ್ಟ್ ಹೊಂದಿರುವುದರಿಂದ ವಾಹನದ ಒಳಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ ಇರುತ್ತದೆ.

*ಉನ್ನತ ದರ್ಜೆ/ ವಿನ್ಯಾಸದ ಆಸನಗಳು ಮತ್ತು ಸಾಮಗ್ರಿಗಳ ಬಳಕೆಯಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಸೌಕರ್ಯ.

*ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸದಿಂದ ವಾಹನದ ನಿರ್ವಹಣೆ ಕೈಗೊಳ್ಳಲು ಸುಲಭವಾಗಿರುತ್ತದೆ.

*ಹಿಂಭಾಗದಲ್ಲಿ fog light ಅನ್ನು ಒಳಗೊಂಡಿರುವುದಿರಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ.

*ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದ್ದು ಚಾಲಕರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ.

ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಅಳವಡಿಸಿದ್ದು ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ. ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪುಗಳಿದ್ದು 30 ನಾಜ಼ಲ್ ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ.

ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು ಪಾದಾಚಾರಿಗಳಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ.

ಸಚಿವ ರಾಮಲಿಂಗಾರೆಡ್ಡಿ ಈ‌ ಬಸ್ಸನ್ನು ವೀಕ್ಷಿಸಿ ಬಹುಮೆಚ್ಚುಗೆ ಸೂಚಿಸಿ, ಕರ್ನಾಟಕವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ಸೇರ್ಪಡೆ ‌ಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು‌ ಹರ್ಷ ವ್ಯಕ್ತಪಡಿಸಿದರು.

BREAKING: ಚೆನ್ನೈನಲ್ಲಿ ತಮಿಳುನಾಡು ಬಿಎಸ್ಪಿ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರವಾಗಿ ಹತ್ಯೆ | Armstrong hacked

‘ಮುಖ್ಯಮಂತ್ರಿ ಕುರ್ಚಿ’ ಮೇಲೆ ಕಣ್ಣಿಟ್ಟವರಿಂದಲೇ ‘ಮುಡಾ ಹಗರಣ’ ಬಹಿರಂಗ: ‘HDK’ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

1 Min Read

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

2 Mins Read

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

2 Mins Read
Recent News

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

ಹರಡುತ್ತಿದೆ ಹಂತಾವೈರಸ್ ಭೀತಿ: ದೇಶಾದ್ಯಂತ ಹದ್ದಿನ ಕಣ್ಣಿಟ್ಟ ಭಾರತೀಯ ಆರೋಗ್ಯ ಸಂಸ್ಥೆಗಳು

​ಭಾರತದ ಪತ್ರಿಕಾಗೋಷ್ಠಿ ನೋಡಿ ಪಾಕಿಸ್ತಾನಕ್ಕೆ ಹೊಟ್ಟೆ ಉರಿ! ‘ಇಂಗ್ಲಿಷ್‌ನಲ್ಲಿ ಯಾಕೆ ಮಾತಾಡ್ತೀರಾ?’ ಎಂದು ಕಿರಿಕ್ ಮಾಡಿದ ನೆರೆರಾಷ್ಟ್ರ | Watch video

ಐಪಿಎಲ್ ಆಟಗಾರರೇ ಎಚ್ಚರ! ‘ಹನಿ ಟ್ರ್ಯಾಪ್’ ಜಾಲದ ಬಗ್ಗೆ ಬಿಸಿಸಿಐ ಖಡಕ್ ವಾರ್ನಿಂಗ್; ಏನಿದು ಅಪಾಯ?

State News
KARNATAKA

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

By kannadanewsnow09 KARNATAKA 1 Min Read

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಮಾರಿಕಾಂಬಾ ದೇವಸ್ಥಾನದ ತಿರುವಿನಲ್ಲಿ ಮರಗಳನ್ನು ತುಂಬಿದ್ದ ಲಾರಿ ಹಾಗೂ ಟಾಟಾ ಏಸ್ ನಡುವೆ…

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.