ಕಟಕ್: ಒಡಿಶಾದ ಕಟಕ್ ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಎರವಲು ಪಡೆದ ಹಣವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಅವನನ್ನು ಹಗ್ಗದಿಂದ ಸ್ಕೂಟರ್ ಗೆ ಕಟ್ಟಿ ಗಾಡಿ ಹಿಂದೆ ಓಡಿ ಬರುವಂತೆ ಮಾಡಲಾಗಿದ್ದು . ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದನ್ನು ನೋಡಿದವರು ಘಟನೆ ಬಗ್ಗೆ ಕಿಡಿಕಾರುತ್ತಿದ್ದಾರೆ. ಅಂದ ಹಾಗೇ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆಯೇ, ಪೊಲೀಸರು ಗಂಭಿರವಾಗಿ ಪರಿಣಾಮಿಸಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಘಟನೆಯಲ್ಲಿ, ಪಡೆದ ಸಾಲವನ್ನು ನೀಡದ ಸಲುವಾಗಿ ಆರೋಪಿಗಳು ಯುವಕನನ್ನು ಸ್ಕೂಟಿಗೆ ಕಟ್ಟಿ ಜನನಿಬಿಡ ರಸ್ತೆಯಲ್ಲಿ ಓಡುವಂತೆ ಮಾಡಲಾಗಿದೆ ಎಂದು ಕಟಕ್ನ ಡಿಸಿಪಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಇಬ್ಬರು ಪುರುಷರು ಯುವಕನನ್ನು ಸ್ಕೂಟರ್ಗೆ ಕಟ್ಟಿ ರಸ್ತೆಯಲ್ಲಿ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಘಟನೆ ಭಾನುವಾರ ಸಂಜೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 24 ವರ್ಷದ ಹುಸೇನ್ ಮತ್ತು 18 ವರ್ಷದ ಚೋಟು ಅವರನ್ನು ಬಂಧಿಸಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಇದರ ನಂತರ, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಯಿತು. ನಂತರ ಇಬ್ಬರೂ ಆರೋಪಿಗಳನ್ನು ಬಂಧಿಸಲಾಯಿತು ಎನ್ನಲಾಗಿದೆ.