Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: 40 ವರ್ಷ ಹಳೆಯ ತಂತ್ರಜ್ಞಾನಕ್ಕೆ ವಿದಾಯ

​ಕ್ಯಾನ್ಸರ್ ರೋಗಿಗಳಿಗೆ ವರದಾನ: ಭಾರತದಲ್ಲಿ 7 ನಿಮಿಷದ ‘ಮ್ಯಾಜಿಕ್’ ಇಂಜೆಕ್ಷನ್ ಲಾಂಚ್!

BREAKING: ಮಧ್ಯಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ನಾಲ್ವರ ಸಾವು, ಹಲವರಿಗೆ ಗಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಕೋಲಾರದಲ್ಲಿ ಪ್ರಜಾಧ್ವನಿ-2 ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿನ ಹೈಲೈಟ್ಸ್
KARNATAKA

ಹೀಗಿದೆ ಕೋಲಾರದಲ್ಲಿ ಪ್ರಜಾಧ್ವನಿ-2 ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿನ ಹೈಲೈಟ್ಸ್

By ವಸಂತ ಬಿ ಈಶ್ವರಗೆರೆ

ಕೋಲಾರ: ಈ ಬಾರಿ ಬಿಜೆಪಿಯನ್ನು ಸೋಲಿಸಿದಾಗ ಮಾತ್ರ 2024 ರ ಲೋಕಸಭಾ ಚುನಾವಣೆಗೆ ಮಹತ್ವ ಬರುತ್ತದೆ. ಮೋದಿ ಅವರು ಎಲ್ಲಿ ಹೋದರು ಕಾಂಗ್ರೆಸ್ ಅನ್ನು ಬೈಯ್ಯುವ ಭಾಷಣ ಮಾಡುತ್ತಿದ್ದಾರೆ. ಕಳೆದ ಭಾನುವಾ ಮೈಸೂರಿನಲ್ಲಿ ಮೋದಿ ಅವರು 30 ನಿಮಿಷ ಭಾಷಣ ಮಾಡಿದರು. ಆದರಲ್ಲಿ 5 ನಿಮಿಷ ಮಾತ್ರ ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಮಿಕ್ಕ 20 ನಿಮಿಷವನ್ನು ಕಾಂಗ್ರೆಸ್ ಬೈಯ್ಯುವುದಕ್ಕೆ ಮೀಸಲಿಟ್ಟರು. ಇದೇ ಮೋದಿ ಅವರ ಕೊಡುಗೆ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮೋದಿ ಅವರು ಈ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮೊದಲು ಹೇಳಬೇಕು. ಬಿಜೆಪಿಯವರು ಮನೆ ಬಾಗಿಲಿಗೆ ಬಂದಾಗ ಜನ ಪ್ರಶ್ನೆ ಮಾಡಬೇಕು. ಬರ ಬಂದಾಗ, ನೆರೆ ಬಂದಾಗ, ತೆರಿಗೆ ಹಣ ಎಷ್ಟು ಕೊಟ್ಟಿದ್ದೀರಿ ಎಂದು ಕೇಳಬೇಕು ಎಂದರು.

ಅನೇಕ ಅಂಕಿ- ಅಂಶಗಳನ್ನು ಸಿದ್ದರಾಮಯ್ಯ ಅವರು, ಸಚಿವ ಕೃಷ್ಣಬೈರೇಗೌಡರು, ಶಿವಕುಮಾರ್ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಎದುರು ಇಟ್ಟಿದ್ದರು. ಅವರು ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತು ಬಿಸಾಕಬೇಕು. ನಿಮ್ಮ ದನಿಗೆ ಅವರು ಹೆದರಿ ಓಡಿ ಹೋಗಬೇಕು.

ಕಾಂಗ್ರೆಸ್ ಈ ದೇಶಕ್ಕೆ ಸಾಕಷ್ಟು ಹೆಸರು ಮಾಡಿದೆ. ಕೋಲಾರ ಎಂದರೆ ಮಿಲ್ಕ್ ಮತ್ತು ಸಿಲ್ಕ್ಗೆ ಪ್ರಸಿದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಫಲದಿಂದ ಕೋಲಾರದ ಕೆರೆಗಳು ತುಂಬಿ ತುಳುಕುತ್ತಿವೆ.

ಸುಳ್ಳು ಹೇಳುವುದೇ ಮೋದಿ ಅವರ ಕೆಲಸ. ಈಗ ನಮ್ಮಿಂದ ಗ್ಯಾರಂಟಿಗಳನ್ನು ಕದ್ದಿದ್ದಾರೆ. ಎಲ್ಲಿ ಹೋದರೂ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದ್ದಾರೆ. ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡಬೇಕಾಗಿತ್ತು. 10 ವರ್ಷದಲ್ಲಿ 20 ಕೋಟಿ ಕೊಡಬೇಕಾಗಿತ್ತು. 15 ಲಕ್ಷ ಕೊಡುತ್ತೇವೆ ಎಂದು ಹೇಳಿದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ಜನ ಅವರಿಂದ ತೆಗೆದುಕೊಂಡು ಸುಳ್ಳು ಹೇಳುತ್ತಿದ್ದಾರೋ ನೀವೇ ಹೇಳಬೇಕು.

ಮೋದಿ ಸುಳ್ಳಿನ ಸರದಾರ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಮ್ಮ ಗ್ಯಾರಂಟಿಗಳು ಯಶಸ್ವಿಯಾಗಿದ್ದನ್ನು ನೋಡಿ ದೇಶದ ಗಲ್ಲಿ, ಗಲ್ಲಿಗಳಲ್ಲಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅನೇಕರು ಹೇಳುತ್ತಾರೆ ಮೋದಿ ಹೆಸರು ತೆಗೆದುಕೊಳ್ಳಬೇಡಿ ಎಂದು. ಆದರೆ ಆ ವ್ಯಕ್ತಿ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆ ಎಂದು ಓಡಾಡುತ್ತಾನೆ. ಆದ ಕಾರಣ ಅವರ ಹೆಸರು ತೆಗೆದುಕೊಳ್ಳಲೇಬೇಕು.

ಬೆಲೆಏರಿಕೆ ಆಗುತ್ತಿದೆ ಆ ಸಮಸ್ಯೆ ಬಗ್ಗೆ ಮೋದಿ ನೋಡುತ್ತಿಲ್ಲ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು. ಯುವಕರಿಗೆ ಉದ್ಯೋಗ ಕೊಡಬೇಕು, ಮಹಿಳೆಯರಿಗೆ ಶಕ್ತಿ ಕೊಡಬೇಕು. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 5 ನ್ಯಾಯಗಳು, 25 ಗ್ಯಾರಂಟಿಗಳನ್ನು ಕೊಟ್ಟೇಕೊಡುತ್ತೇವೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ.

ಪಂಚಭೂತಗಳಲ್ಲಿ ‘ಲೀನವಾದ’ ದ್ವಾರಕೀಶ್‌, ಕನ್ನಡದ ಕುಳ್ಳ ಇನ್ನೂ ನೆನಪು ಮಾತ್ರ!

GOOD NEWS: ಇಪಿಎಫ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ಈಗ ಮೂರು ದಿನಗಳಲ್ಲಿ ಸಿಗಲಿದೆ ಒಂದು ಲಕ್ಷ ಹಣ!

Share. Facebook Twitter LinkedIn WhatsApp Email

Related Posts

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

2 Mins Read

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

1 Min Read

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

1 Min Read
Recent News

ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: 40 ವರ್ಷ ಹಳೆಯ ತಂತ್ರಜ್ಞಾನಕ್ಕೆ ವಿದಾಯ

​ಕ್ಯಾನ್ಸರ್ ರೋಗಿಗಳಿಗೆ ವರದಾನ: ಭಾರತದಲ್ಲಿ 7 ನಿಮಿಷದ ‘ಮ್ಯಾಜಿಕ್’ ಇಂಜೆಕ್ಷನ್ ಲಾಂಚ್!

BREAKING: ಮಧ್ಯಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ನಾಲ್ವರ ಸಾವು, ಹಲವರಿಗೆ ಗಾಯ

ಚುನಾವಣಾ ಆಯುಕ್ತರ ನೇಮಕ: ‘ಸ್ವಾಯತ್ತತೆಯ ಈ ಪ್ರದರ್ಶನವೇಕೆ?’: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೇರ ಪ್ರಶ್ನೆ!

State News
KARNATAKA

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇ 14ರಿಂದ 17ರವರೆಗೆ ನಡೆಯಲಿರುವ ಇಎಲ್‌ಎಎಸ್‌ಐಎ 2026 ಭಾಗವಾದ ರಿನ್ಯೂವೆಬಲ್ ಏಷ್ಯಾ ಅಂಡ್‌…

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

BREAKING: ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.