ಕೆಎನ್ ಎನ್ ನ್ಯೂಸ್ ಡೆಸ್ಕ್ : ದೇಹದ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಬಾಯಿಯ ದುರ್ವಾಸನೆ ನಿಮ್ಮನ್ನು ಕಾಡುತ್ತದೆ. ಇದು ಅನೇಕ ಜನರ ಸಮಸ್ಯೆ. ಹಲವು ಬಾರಿ ಇದರಿಂದ ಸಾರ್ವಜನಿಕವಾಗಿ ಮುಜುಗರಕ್ಕೆ ಇಡುಮಾಡುತ್ತದೆ.
BIGG NEWS: ಗದಗದಲ್ಲಿ ಅತಿಥಿ ಉಪನ್ಯಾಸಕ ಮನಬಂದಂತೆ ಥಳಿಸಿ ವಿದ್ಯಾರ್ಥಿ ಸಾವು; ಶಿಕ್ಷಕನಿಗಾಗಿ ಹುಡುಕಾಟ
ಈ ಸಮಸ್ಯೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ನಿಮ್ಮೊಂದಿಗೆ ಬೆರೆಯುವವರಿಗೆ ಇದರಿಂದ ಕಿರಿಕಿರಿ ಉಂಟುಮಾಡಬಹುದು. ನಿಮ್ಮೊಡನೆ ಮಾತನಾಡುವವರಿಗೆ ನಿಮ್ಮ ಬಾಯಿಯ ದುರ್ವಾಸನೆಯಿಂದ ಕಿರಿಕಿರಿಯಾದರೆ, ಆ ಮುಜುಗರವನ್ನು ನೀವು ಅನುಭವಿಸಬೇಕಾಗುತ್ತದೆ.
ಕೆಲವೊಮ್ಮೆ ದೇಹದ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವವರು ಕೂಡಾ, ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದು ಕೆಲ ಗಂಭೀರ ಆಂತರಿಕ ಕಾಯಿಲೆಯಿಂದ ಬಳಲುತ್ತಿರುವ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ತೆಗೆದುಕೊಳ್ಳುವುದು ಬಹಳ ಮುಖ್ಯ.
ಬಾಯಿಯ ದುರ್ವಾಸನೆಗೆ ಕಾರಣಗಳೇನು?
ಬಾಯಿಯ ದುರ್ವಾಸನೆಯು ಹಲ್ಲಿನ ಕಾಯಿಲೆಗಳು, ಕರುಳಿನ ಸಮಸ್ಯೆಗಳು, ಆಮ್ಲೀಯತೆ, ಮಧುಮೇಹ, ಶ್ವಾಸಕೋಶದ ಸೋಂಕು ಅಥವಾ ಕಡಿಮೆ ನೀರು ಕುಡಿಯುವುದರಿಂದ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಯಮಿತವಾಗಿ ಹಲ್ಲುಜ್ಜದಿರುವುದು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇದು ಬಾಯಿಯ ದುರ್ಗಂಧಕ್ಕೆ ಕಾರಣವಾಗಬಹುದು. ಇದರೊಂದಿಗೆ ಧೂಮಪಾನ ಅಥವಾ ತಂಬಾಕನ್ನು ಜಗಿಯುವುದು ಕೂಡ ಬಾಯಿಯ ವಾಸನೆಗೆ ಪ್ರಮುಖ ಕಾರಣ.
ಬಾಯಿಯ ದುರ್ವಾಸನೆ ತಡೆಯುವುದು ಹೇಗೆ?
ವೈದ್ಯರ ಪ್ರಕಾರ, ಪ್ರತಿದಿನ ಬೆಳಗ್ಗೆ ಹಲ್ಲುಜ್ಜುವುದು ಮತ್ತು ಟಂಗ್ ಕ್ಲೀನರ್ ಅನ್ನು ಬಳಸುವುದರಿಂದ ಹಿಂದಿನ ರಾತ್ರಿ ಬಾಯಿಯಲ್ಲಿ ಸಂಗ್ರಹವಾಗಿರುವ ಎಲ್ಲಾ ವಿಷ ಅಂಶಗಳನ್ನು ತೆಗೆದುಹಾಕಬಹಹುದು. ಇದಕ್ಕಿಂತ, ನೀವು ರಾತ್ರಿಯಲ್ಲೇ ಬ್ರಷ್ ಮತ್ತು ಫ್ಲೋಸ್ ಮಾಡಿದರೆ, ನಿಮ್ಮ ಬಾಯಿ ಸ್ವಚ್ಛವಾಗಿರುತ್ತದೆ. ಇದು ನಿಮ್ಮ ಕರುಳಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ.
ಊಟದ ನಂತರ ಸೋಂಪು ಕಾಳು ತಿನ್ನಿ
ಸಾಮಾನ್ಯವಾಗಿ ರೆಸ್ಟೋರೆಂಟ್ಗಳಲ್ಲಿ ಊಟದ ಬಳಿಕ ಬಾಳಿಕ ಬಾಯಿಯಲ್ಲಿ ಹಾಕಿಕೊಳ್ಳಲು ಸೋಂಪು ಕಾಳನ್ನು ಇಟ್ಟಿರುತ್ತಾರೆ. ಈ ಕಾಳುಗಳು ಜೀರ್ಣಕಾರಿ ಸ್ವಭಾವವನ್ನು ಹೊಂದಿರುತ್ತವೆ ಮತ್ತು ಫ್ಲೇವನಾಯ್ಡ್ಗಳನ್ನು ಹೊಂದಿರುತ್ತವೆ. ಇದು ಲಾಲಾರಸದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಮೂಲಕ ಬಾಯಿ ಒಣಗುವುದನ್ನು ತಡೆಯುತ್ತದೆ. ಸೋಂಪು ಕಾಳುಗಳು ಆರೊಮ್ಯಾಟಿಕ್ ಪರಿಮಳವನ್ನು ಹೊಂದಿರುತ್ತದೆ. ಹೀಗಾಗಿ ದೀರ್ಘಕಾಲದವರೆಗೆ ಪರಿಮಳ ಬೀರುತ್ತದೆ. ಇದು ನಿಮ್ಮ ಬಾಯಿಯ ದುರ್ಗಂಧವನ್ನು ತಡೆಯುತ್ತದೆ.
ಊಟದ ನಂತರ ಬಾಯಿ ತೊಳೆಯಿರಿ
ಆಯುರ್ವೇದದ ಪ್ರಕಾರ, ಊಟದ ನಂತರ ನೀರು ಕುಡಿಯುವಂತಿಲ್ಲ. ಏಕೆಂದರೆ ಅದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಆದರೆ ಬಾಯಿಯನ್ನು ಸ್ವಚ್ಛಗೊಳಿಸಲು ನೀರು ಅವಶ್ಯಕ. ವಿಶೇಷವಾಗಿ ಊಟದ ನಂತರ. ಹೀಗಾಗಿ ತಿಂದ ನಂತರ 2ರಿಂದ 3 ನಿಮಿಷಗಳ ಗಾರ್ಗ್ಲ್ ಮಾಡಿ ನಿಮ್ಮ ಬಾಯಿಯನ್ನು ತೊಳೆಯಿರಿ. ಬಾಯಿಯಲ್ಲಿ ಯಾವುದೇ ಆಹಾರದ ಕಣಗಳು ಉಳಿಯದಂತೆ ಸ್ವಚ್ಛಗೊಳಿಸಿ.