ಶಿವಮೊಗ್ಗ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಸ್ಮಾಟ್ಸಿಟಿ ಯೋಜನೆಯಡಿಯಲ್ಲಿ ಶಿವಮೊಗ್ಗ ನಗರವು 2ನೇ ಹಂತದಲ್ಲಿ ಆಯ್ಕೆಗೊಂಡಿದ್ದು, ಹಸಿರು ನಗರೀಕರಣದ ಮೂಲಕ ಶಿವಮೊಗ್ಗವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವ ಗುರಿ ಹಾಗೂ ಸಾರ್ವಜನಿಕರಿಗೆ ಮೂಲಸೌಲಭ್ಯವನ್ನು ಒದಗಿಸಿ ಭವಿಷ್ಯದ ಉತ್ತಮ ವಾಸಯೋಗ್ಯ ಮತ್ತು ಅತಿಸುಂದರ ನಗರವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿದೆ. ಈ ಕಾಮಗಾರಿಗಳನ್ನು ದೋಷರಹಿತವಾಗಿ ನಿರ್ವಹಿಸಲು ಎಲ್ಲಾ ಕ್ರಮಗಳನ್ನು ವಹಿಸಲಾಗುತ್ತಿದೆ. ಆದರೂ ಸಣ್ಣಪುಟ್ಟ ದೋಷಗಳನ್ನು ಕಂಡುಬಂದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನಾಗಲಿ ಅಥವಾ ಸ್ಮಾರ್ಟ್ಸಿಟಿ ಅಧಿಕಾರಿಗಳನ್ನಾಗಲಿ ಸಾರ್ವಜನಿಕರು ಕೂಡಲೇ ಇಲ್ಲಿ ನೀಡಿರುವ ಮೊ.ಸಂ.ಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸ್ಮಾರ್ಟ್ಸಿಟಿ ಲಿ., ಉಪಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲ ತಿಳಿಸಿರುತ್ತಾರೆ.
ಕಾ.ಇಂ.ಮೆಸ್ಕಾಂ- ವೀರೇಂದ್ರ-9448289446, ಸ.ಕಾ.ಇಂ., ಮೆಸ್ಕಾಂ-ಸುರೇಶ್-9448289448, ಸ.ಕಾ.ಇಂ., ಮೆಸ್ಕಾಂ-ಹೇಮ್ಲಾನಾಯ್ಕ್-9448289449, ಸ.ಕಾ.ಇಂ., ಮೆಸ್ಕಾಂ- ರವೀಂದ್ರ-9480841339, ಸ.ಕಾ.ಇಂ., ಸ್ಮಾರ್ಟ್ಸಿಟಿ-ಮಹದೇವಪ್ಪ-8105558389, ಸ.ಇಂ., ಸ್ಮಾರ್ಟ್ಸಿಟಿ- ಸಚಿನ್-8317420012, ಸ.ಇಂ., ಸ್ಮಾರ್ಟ್ಸಿಟಿ-ಅಭಿಲಾಷ್-8618717413, ಸಾ.ಸಂ.ಅ, ಸ್ಮಾರ್ಟ್ಸಿಟಿ- ಬ್ರಿಜಿಟ್ ವರ್ಗೀಸ್ – 6361031995 ಇವರುಗಳನ್ನು ಸಂಪರ್ಕಿಸುವುದು.