ಬೆಂಗಳೂರು: ಬಿರು ಬಿಸಿಲಿನಿಂದ ರಾಜ್ಯದ ಜನರು ಕಂಗೆಟ್ಟಿದ್ದಾರೆ. ಅಬ್ಬಾ ಮಳೆ ಬಂದ್ರೆ ಸಾಕಪ್ಪ ಅಂತ ಕಾಯುತ್ತಿದ್ದಾರೆ. ಈಗ ಬೇಸಿಗೆಯಿಂದ ಬಳಲಿರುವಂತ ಜನರಿಗೆ ಸಂತರಸದ ಸುದ್ದಿ ಎನ್ನುವಂತೆ ಇಂದು ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗಲಿದೆ ಅಂತ ಮುಂದೆ ಓದಿ.
ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಮೇ.11ರವರೆಗೆ ರಾಜ್ಯದ ಹಲವೆಡೆ ಇಂದಿನಿಂದ ಮಳೆಯಾಗಲಿದೆ. ಗುಡುಗು, ಸಡಿಲು ಸಮೇತ ಮಳೆಯಾಗೋ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದೆ.
ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ಕೋಲಾರದಲ್ಲಿ ಮಳೆಯಾಗೋ ನಿರೀಕ್ಷೆಯಿದೆ ಎಂದಿದೆ.
ಸಿಲಿಕಾನ್ ಸಿಟಿ ಜನತೆಗೂ ಸಂತಸ ಸುದ್ದಿ ಎನ್ನುವಂತೆ ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆಯಾಗಲಿದೆ. ವಾಹನ ಸವಾರರು, ಜನರು ಮುಂಜಾಗ್ರತಾ ಕ್ರಮವಹಿಸಿದ್ರೆ ಒಳ್ಳೇದು ಎಂಬುದಾಗಿ ಹೇಳಿದೆ.
ಇನ್ನೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗೋ ಮುನ್ಸೂಚನೆಯನ್ನು ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು, ಸಿಡಿಲ ಜೊತೆಗೆ ವರುಣ ಆರ್ಭಟಿಸಲಿದ್ದಾನೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್
ಪ್ರಜ್ವಲ್ ‘ಪೆನ್ ಡ್ರೈವ್’ ಕೇಸಲ್ಲಿ ಹಾಸನ ಮಾಜಿ ಶಾಸಕನ ಕೈವಾಡವಿದೆ : ಶಾಸಕ ರವಿಗಣಿಗ ಗಂಭೀರ ಆರೋಪ