Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇ.24ರಂದು ‘ಸೇಡಂ’ ತಾಲ್ಲೂಕಿನಲ್ಲಿ ಬಿಜೆಪಿಯಿಂದ ‘ಬೃಹತ್ ತಿರಂಗ ಯಾತ್ರೆ’

20/05/2025 9:55 PM

5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಷ್ಟು ಗೊತ್ತೇ? ಇಲ್ಲಿದೆ ಸಿಎಂ ಸಿದ್ಧರಾಮಯ್ಯ ಕೊಟ್ಟ ವಿವರ

20/05/2025 9:47 PM

ವಾಸಿಸುವವನೇ ನೆಲದ ಒಡೆಯ, ಇದು ನಮ್ಮ ಸಂಕಲ್ಪ: ಸಿಎಂ ಸಿದ್ಧರಾಮಯ್ಯ

20/05/2025 9:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಭಾರಿ ಮಳೆಗೆ ಪ್ರಮುಖ 58 ರಸ್ತೆಗಳು ಜಲಾವೃತ: 39 ಕಡೆ ಮರ ಬಿದ್ದು ಸಂಚಾರ ಅಸ್ತವ್ಯಸ್ಥ
KARNATAKA

ಬೆಂಗಳೂರಲ್ಲಿ ಭಾರಿ ಮಳೆಗೆ ಪ್ರಮುಖ 58 ರಸ್ತೆಗಳು ಜಲಾವೃತ: 39 ಕಡೆ ಮರ ಬಿದ್ದು ಸಂಚಾರ ಅಸ್ತವ್ಯಸ್ಥ

By kannadanewsnow0902/06/2024 9:48 PM

ಬೆಂಗಳೂರು: ಸಿಲಿಕಾನ್ ಸಿಟಿ ಇಂದು ಅಕ್ಷರಶಃ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಂತ ಮಳೆಯಿಂದಾಗಿ ನಗರದ ಪ್ರಮುಖ 58 ರಸ್ತೆಗಳು ಜಲಾವೃತಗೊಂಡಿದ್ದರೇ, 39 ಕಡೆ ಮರ ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ.

ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಜಂಟಿ ಪೊಲೀಸ್ ಆಯುಕ್ತರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಬೆಂಗಳೂರಲ್ಲಿ ಭಾರೀ ಮಳೆಯಿಂದಾಗಿ  ಪ್ರಮುಖ ರಸ್ತೆಗಳಲ್ಲಿ 58 ಸ್ಥಳಗಳಲ್ಲಿ ನೀರು ನಿಂತಿದೆ. 39 ಸ್ಥಳಗಳಲ್ಲಿ ಮರಗಳು ಬಿದ್ದಿವೆ. ದಟ್ಟಣೆ ಹೆಚ್ಚಾಗಿದೆ. ರಸ್ತೆಗಳನ್ನು ತೆರವುಗೊಳಿಸಲು ನಾಗರಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ.

Today due to heavy rains, we have had waterlogging at 58 locations and tree fall at 39 locations on important arterial roads of Bengaluru. Congestion is high. Civic Agencies are working to clear the roads. @BlrCityPolice @blrcitytraffic

— Joint CP, Traffic, Bengaluru (@Jointcptraffic) June 2, 2024

ಬೆಂಗಳೂರಲ್ಲಿ ಭಾರೀ ಮಳೆ: ಜನತೆಗೆ ಸಂಚಾರ ಪೊಲೀಸರಿಂದ ಈ ಸಲಹೆ

ಬೆಂಗಳೂರಲ್ಲಿ ಸತತ ಒಂದು ಗಂಟೆ ಸುರಿದಂತ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದಾವೆ. ಎಲ್ಲೆಲ್ಲೂ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಜನತೆಗೆ ಕೆಲ ಸಲಹೆ ನೀಡಿದೆ. ಆ ಬಗ್ಗೆ ಮುಂದೆ ಓದಿ.

ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ ಅಂತ ತಿಳಿಸಿದೆ.

ತುಮಕೂರು ರಸ್ತೆಯಲ್ಲಿ (ಪೀಣ್ಯ ರಸ್ತೆ) IISc ಮುಖ್ಯ ಗೇಟ್ ಮತ್ತು ಯಶವಂತಪುರ ಮೇಲ್ಸೇತುವೆ ನಡುವೆ ಮರ ಬಿದ್ದಿದೆ. ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮರ ಕಡಿಯುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಭಾರೀ ಮಳೆಯಿಂದಾಗಿ ಈ ಕೆಳಗಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ

1)ನಾರಾಯಣಪುರಯಿಂದ ಹೆಣ್ಣೂರು ಬಾಗಲೂರು ರಸ್ತೆ ಕಡೆಗೆ 2) ಕಲ್ಪನಾ ಜಂಕ್ಷನ್ ನಿಂದ ವಸಂತನಗರ ಅಂಡರ್‌ಪಾಸ್ ಕಡೆಗೆ 3)ಆನೆಪಾಳ್ಯ ಜಂಕ್ಷನ್ (ಹೊಸೂರು ರಸ್ತೆ), 4)ರಿಚ್ಮಂಡ್ ವೃತ್ತ, 5)RRMR ರಸ್ತೆ 6 ) ಶಾಂತಿನಗರ. 7 )ಕಿನೋ teatre ಜಂಕ್ಷನ್ನಿಂದ ಶೇಷಾದ್ರಿಪುರಂ ಪೊಲೀಸ್ ಠಾಣೆ ಕಡೆಗೆ 8 ) ವೀರಣ್ಣಪಾಳ್ಯ ಡೌನ್ ರಾಂಪ್ ಯಿಂದ ನಾಗವಾರ ಕಡೆಗೆ 9 )ಸಂಜಯ ನಗರಇಂದ ದೇವಿನಗರ ಕಡೆಗೆ ಅಂತ ಹೇಳಿದೆ.

ಲಾಲ್‌ಬಾಗ್ ಮುಖ್ಯ ಗೇಟ್ ರಸ್ತೆಯ ಬಳಿ ಮರದ ಕೊಂಬೆ ಬಿದ್ದ ಕಾರಣ ಲಾಲ್‌ಬಾಗ್ ಪಶ್ಚಿಮ ಗೇಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸುವಂತೆ ಮನವಿ ಮಾಡಿದೆ.

ಹೆಚ್‌ಎಂಟಿ teatre ಮರ ಬಿದ್ದಿರುವುದರಿಂದ ಬಿಎಫ್‌ಡಬ್ಲ್ಯೂ ರಸ್ತೆ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ. ಲ್‌ಆರ್‌ಡಿಇ ಜಂಕ್ಷನ್‌ನಲ್ಲಿ ಮರ ಬಿದ್ದಿರುವುದರಿಂದ ಬಸವೇಶ್ವರ ವೃತ್ತದ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ.

ಭಾರೀ ಮಳೆಯಿಂದಾಗಿ ಈ ಕೆಳಗಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ 1) ನಾಯಂಡಹಳ್ಳಿ ಜಂಕ್ಷನ್ ನಿಂದ BHEL ಕಡೆಗೆ 2) ರಾಜೀವ್ ಗಾಂಧಿ ಜಂಕ್ಷನ್ನಿಂದ ಮಂತ್ರಿಮಾಲ್ ಕಡೆಗೆ 3)ಕೊಡೆ ಸರ್ಕಲ್ ನಿಂದ ಲುಲು ಮಾಲ್ ಕಡೆಗೆ 4)ಯಲಹಂಕಯಿಂದ ಕೋಗಿಲೆ ಕ್ರಾಸ್ ಕಡೆಗೆ ಅಂತ ತಿಳಿಸಿದೆ.

ವಾಟರ್ ಲಾಗಿಂಗ್ ನಿಂದಾಗಿ ವೀರಣ್ಣಪಾಳ್ಯ ಜಂಕ್ಷನ್ ನಲ್ಲಿ ನಿಧಾನಗತಿಯ ವಾಹನ ಸಂಚಾರವಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ. ಜಯನಗರ 5ನೇ ಬ್ಲಾಕ್ ಅರವಿಂದ ಜಂಕ್ಷನ್ ಬಳಿ ಮರ ಬಿದ್ದ ಕಾರಣ, ರಾಜಲಕ್ಷ್ಮಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯವಿಟ್ಟು ಸಹಕರಿಸಿ. ಶೀಘ್ರದಲ್ಲಿ ತೆವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.

ಮಳೆಯಿಂದಾಗಿ ಕೆಳಕಂಡ ಸ್ಥಳಗಳಲ್ಲಿ ವಾಟರ್ ಲಾಗಿಂಗ್ ಆಗಿದ್ದು ನಿಧಾನಗತಿಯ ವಾಹನ ಸಂಚಾರವಿರುತ್ತದೆ. ಸಾರ್ವಜನಿಕರು ಸಹಕರಿಸಲು ಕೋರಿದೆ. 1. ಅಪ್ ರ್ಯಾಂಪ್ ಸರ್ವಿಸ್ ರಸ್ತೆ ಹೆಬ್ಬಾಳ ವೃತ್ತದ ಕಡೆಗೆ. 2. ಫ್ಲೈಓವರ್ ಡೌನ್ ರ್ಯಾಂಪ್ ಕೆಂಪಾಪುರ ಕಡೆಗೆ. 3. ಯೋಗೇಶ್ವರನಗರ ಕ್ರಾಸ್ ಹೆಬ್ಬಾಳ ವೃತ್ತದ ಕಡೆಗೆ ಎಂದು ಮಾಹಿತಿ ನೀಡಿದೆ.

ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ ಹೋಟೆಲ್ ಹತ್ತಿರ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ವಾಹನ ಸವಾರರು/ಚಾಲಕರು ಸಹಕರಿಸಲು ಕೋರಿದೆ.

ನಾಳೆ ‘ಪರಿಷತ್ ಚುನಾವಣೆ’ಗೆ ಮತದಾನ: ಗೆಲುವಿನ ವಿಶ್ವಾಸದಲ್ಲಿ ‘ಡಾ.ಕೆ.ಕೆ ಮಂಜುನಾಥ್ ಕುಮಾರ್’

‘ಮೋದಿ’ ಮತ್ತೊಮ್ಮೆ ‘ಪ್ರಧಾನಿ’ಯಾಗ್ತಾರೆ: ‘ಕಾಲ ಭೈರವೇಶ್ವರ’ನ ‘ಶ್ವಾನ ಭವಿಷ್ಯ’

Share. Facebook Twitter LinkedIn WhatsApp Email

Related Posts

ಮೇ.24ರಂದು ‘ಸೇಡಂ’ ತಾಲ್ಲೂಕಿನಲ್ಲಿ ಬಿಜೆಪಿಯಿಂದ ‘ಬೃಹತ್ ತಿರಂಗ ಯಾತ್ರೆ’

20/05/2025 9:55 PM1 Min Read

5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಷ್ಟು ಗೊತ್ತೇ? ಇಲ್ಲಿದೆ ಸಿಎಂ ಸಿದ್ಧರಾಮಯ್ಯ ಕೊಟ್ಟ ವಿವರ

20/05/2025 9:47 PM1 Min Read

ವಾಸಿಸುವವನೇ ನೆಲದ ಒಡೆಯ, ಇದು ನಮ್ಮ ಸಂಕಲ್ಪ: ಸಿಎಂ ಸಿದ್ಧರಾಮಯ್ಯ

20/05/2025 9:40 PM1 Min Read
Recent News

ಮೇ.24ರಂದು ‘ಸೇಡಂ’ ತಾಲ್ಲೂಕಿನಲ್ಲಿ ಬಿಜೆಪಿಯಿಂದ ‘ಬೃಹತ್ ತಿರಂಗ ಯಾತ್ರೆ’

20/05/2025 9:55 PM

5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಷ್ಟು ಗೊತ್ತೇ? ಇಲ್ಲಿದೆ ಸಿಎಂ ಸಿದ್ಧರಾಮಯ್ಯ ಕೊಟ್ಟ ವಿವರ

20/05/2025 9:47 PM

ವಾಸಿಸುವವನೇ ನೆಲದ ಒಡೆಯ, ಇದು ನಮ್ಮ ಸಂಕಲ್ಪ: ಸಿಎಂ ಸಿದ್ಧರಾಮಯ್ಯ

20/05/2025 9:40 PM

BREAKING : ರಾಜ್ಯದಲ್ಲಿ ಕೊರೊನ ಹೊಸ ತಳಿಯ 8 ಪ್ರಕರಣ ಪತ್ತೆ : ನಿರ್ಲಕ್ಷ್ಯ ಬೇಡ ಎಂದ ಆರೋಗ್ಯ ಇಲಾಖೆ!

20/05/2025 9:38 PM
State News
KARNATAKA

ಮೇ.24ರಂದು ‘ಸೇಡಂ’ ತಾಲ್ಲೂಕಿನಲ್ಲಿ ಬಿಜೆಪಿಯಿಂದ ‘ಬೃಹತ್ ತಿರಂಗ ಯಾತ್ರೆ’

By kannadanewsnow0920/05/2025 9:55 PM KARNATAKA 1 Min Read

ಸೇಡಂ: ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವಿನ ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಅಭೂತ ಪೂರ್ವ ಸಾಧನೆಗೈದಿತ್ತು. ಈ ಹಿನ್ನಲೆಯಲ್ಲಿ…

5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಷ್ಟು ಗೊತ್ತೇ? ಇಲ್ಲಿದೆ ಸಿಎಂ ಸಿದ್ಧರಾಮಯ್ಯ ಕೊಟ್ಟ ವಿವರ

20/05/2025 9:47 PM

ವಾಸಿಸುವವನೇ ನೆಲದ ಒಡೆಯ, ಇದು ನಮ್ಮ ಸಂಕಲ್ಪ: ಸಿಎಂ ಸಿದ್ಧರಾಮಯ್ಯ

20/05/2025 9:40 PM

BREAKING : ರಾಜ್ಯದಲ್ಲಿ ಕೊರೊನ ಹೊಸ ತಳಿಯ 8 ಪ್ರಕರಣ ಪತ್ತೆ : ನಿರ್ಲಕ್ಷ್ಯ ಬೇಡ ಎಂದ ಆರೋಗ್ಯ ಇಲಾಖೆ!

20/05/2025 9:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.