ಮಂಡ್ಯ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

Varamahalakshmi: ನಾಳೆ ವರಮಹಾಲಕ್ಷ್ಮಿಯನ್ನು ಹೇಗೆ ಅಲಂಕರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್​​​​​​​​​​​​​​​​​​

ಕೆಆರ್‌ಎಸ್ ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 124.76 ಅಡಿಗಳಷ್ಟಿದೆ. ಇಂದಿನ ಒಳಹರಿವಿನ ಪ್ರಮಾಣ 67,712 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 81,112 ಕ್ಯೂಸೆಕ್‌ನಷ್ಟಿದೆ.

Varamahalakshmi: ನಾಳೆ ವರಮಹಾಲಕ್ಷ್ಮಿಯನ್ನು ಹೇಗೆ ಅಲಂಕರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್​​​​​​​​​​​​​​​​​​

 

ಕೆಆರ್‌ ಎಸ್‌ ಜಲಾಶಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ನಿಮಿಷಾಂಭ ದೇವಸ್ಥಾನದ ಸ್ನಾನ ಘಟ್ಟ ಹಾಗೂ ಅಕ್ಕ-ಪಕ್ಕದ ತೋಟಗಳು, ಮನೆಗಳು ಮುಳುಗಡೆಯಾಗಿವೆ. ಹೀಗಾಗಿ ಕಾವೇರಿ ನದಿಗೆ ಇಳಿಯದಂತೆ ಸಾವರ್ಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.ಇನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ. ಇದರಿಂದ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

Share.
Exit mobile version