ಬೆಂಗಳೂರು: ನಗರದಲ್ಲಿ ಸತತ ಒಂದು ಗಂಟೆಯಿಂದ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧೆಡೆ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಅಂಡರ್ ಪಾಸ್ ಗೆ ನೀರು ನುಗ್ಗಿದ ಪರಿಣಾಮ, ನೀರಿನಲ್ಲಿ ಬಿಎಂಟಿಸಿ ಬಸ್ಸೊಂದು ಸಿಲುಕಿರೋದಾಗಿ ತಿಳಿದು ಬಂದಿದೆ.
ಇಂದು ಸಂಜೆ ಬೆಂಗಳೂರಲ್ಲಿ ವರುಣಾರ್ಭಟವಾಗಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹಲವು ಮರಗಳು ರಸ್ತೆಗಳಿಗೆ ಉರುಳಿವೆ. ದೇವಸಂದ್ರ ಬಸ್ ನಿಲ್ದಾಣದ ಬಳಿ ದೊಡ್ಡ ಮರ ರಸ್ತೆಗೆ ಉರುಳಿ ಬಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಕಳೆದ ಅರ್ಧ ಗಂಟೆಯಿಂದ ಬೆಂಗಳೂರು ದಕ್ಷಿಣದಲ್ಲಿ ಬಿರುಗಾಳಿ ಸಹಿತ ರಣ ಭೀಕರ ಮಳೆಯಾಗುತ್ತಿದೆ. ಮಳೆಯ ನೀರು ಚರಂಡಿ ತುಂಬಿ, ರಸ್ತೆಗೆ ಹರಿದ ಪರಿಣಾಮ, ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತ
ಬಿರುಗಾಳಿ, ಗುಡುಗು ಸಹಿತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮೆಟ್ರೋ ರೈಲ್ವೆ ಹಳಿಯ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದ್ರನಗರದಿಂದ ವೈಟ್ ಫೀಲ್ಡ್ ಹಾಗೂ ಎಂಜಿ ರಸ್ತೆ ನಡುವಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಟ್ರಿನಿಟಿ ನಿಲ್ದಾಣದ ನಂತರ ಎಂಜಿ ರಸ್ತೆಯ ಕಡೆಗೆ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಈ ಕಾರಣದಿಂದಾಗಿ ಇಂದ್ರನಗರದಿಂದ ವೈಟ್ಫೀಲ್ಡ್ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದವರೆಗೆ ರಾತ್ರಿ 7.26ರಿಂದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ ಎಂದಿದೆ.
ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಬಿದ್ದಿರುವಂತ ಮರದ ಕೊಂಬೆಯನ್ನು ತೆರವುಗೊಳಿಸೋ ಕಾರ್ಯ ನಡೆಯುತ್ತಿದೆ. ಈ ತೆರವು ಕಾರ್ಯಾಚರಣೆ ನಡೆದ ಬಳಿಕ, ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಪ್ರಯತ್ನಿಸಲಾಗುತ್ತದೆ ಅಂತ ತಿಳಿಸಿದೆ.
‘ಮೋದಿ’ ಮತ್ತೊಮ್ಮೆ ‘ಪ್ರಧಾನಿ’ಯಾಗ್ತಾರೆ: ‘ಕಾಲ ಭೈರವೇಶ್ವರ’ನ ‘ಶ್ವಾನ ಭವಿಷ್ಯ’
BREAKING: ಶರಣಾಗತಿ ಬೆನ್ನಲ್ಲೇ, ಜೂ.5ರವರೆಗೆ ‘ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ನ್ಯಾಯಾಂಗ ಬಂಧನ