ಬೆಂಗಳೂರು: ಸಿಲಿಕಾನ್ ಸಿಟಿ ( Cilicon City ) ಜನತೆ ದಿನೇ ದಿನೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿ ಭಾರೀ ಅವಾಂತರವೇ ಸೃಷ್ಠಿಯಾಗಿದೆ. ಈ ನಡುವೆ ಇದೀಗ ನಗರದಲ್ಲಿ ಮತ್ತೆ ಮಳೆ ಆರಂಭಗೊಂಡಿದೆ.
ಬೆಂಗಳೂರು ನಗರದ ಹಲವೆಡೆ ವರುಣ ಇದೀಗ ಆರ್ಭಟಿಸುತ್ತಿದ್ದಾರೆ. ನಗರದ ಮೆಜೆಸ್ಟಿಕ್, ಮಲ್ಲೇಶ್ವರಂ, ಗಾಂಧಿನಗರ, ರೇಸ್ ಕೋರ್ಸ್ ರಸ್ತೆ, ಮೇಖ್ರಿ ಸರ್ಕಲ್, ಹೆಬ್ಬಾಳ ಸೇರಿದಂತೆ ಹಲವೆಡೆ ಧಾರಾಕರ ಮಳೆ ಸುರಿಯುತ್ತಿದೆ.
BREAKING NEWS : ಮಂಡ್ಯದ ಕೆಆರ್ಎಸ್ ಬೃಂದಾವನ ಪಾರ್ಕ್ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ
ನಗರದಲ್ಲಿ ಆರಂಭಗೊಂಡಿರುವಂತ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಅನೇಕ ಕಡೆಯಿಂದಾಗಿ ರಸ್ತೆಯಲ್ಲಿ ನೀರು ನುಗ್ಗಿದ ಪರಿಣಾಮ ಸಂಚಾರ ದಟ್ಟಣೆ ಕೂಡ ಉಂಟಾಗಿದೆ.