ಬೆಂಗಳೂರು: ರಾಜ್ಯದಲ್ಲಿ ಸ್ವಲ್ಪ ಮಳೆಯ ಪ್ರಮಾಣ ತಗ್ಗಿದೆ. ಆದರೂ ಕೂಡ ನದಿಗಳೆಲ್ಲ ತುಂಬಿ ಉಕ್ಕಿ ಹರಿದು ಜನರಿಗೆ ಸಂಕಷ್ಟ ಎದುರಾಗಿದೆ.
BREAKING NEWS: ಮಲೆನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ:ಗಾಳಿ-ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿತ
ನದಿ ತೀರದ ಭಾಗದಲ್ಲಿ ಪ್ರವಾಹ, ನೆರೆ ಭೀತಿ ಎದುರಾಗಲಿದೆ. ಇಂದು ಉಡುಪಿ, ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬಯಲುಸೀಮೆ ಭಾಗದಲ್ಲಿ ಬಿಡುವು ನೀಡಿದೆ.
BREAKING NEWS: ಮಲೆನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ:ಗಾಳಿ-ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿತ
ಭಾರೀ ಮಳೆಯ ಪರಿಣಾಮ ಅಲ್ಲಲ್ಲಿ ಅವಘಡಗಳು ಸಂಭವಿಸಿವೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಳಸ ಚಿಕ್ಕಮಗಳೂರು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಯಾಗುತ್ತಿದೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.