ಬೆಂಗಳೂರು: ಕೆಲ ದಿನಗಳಿಂದ ಮಳೆರಾಯ ಕೊಂಚ ಬಿಡುವು ಪಡೆದುಕೊಂಡಿತ್ತು. ನಂತರ ನಗರದಲ್ಲಿ ವಿಪರೀತ ಚಳಿ ಶುರುವಾಗಿದ್ದು ಜನರು ನಲುಗಿ ಹೋಗಿದ್ದಾರೆ.
ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ ‘KRS’ ಬೃಂದಾವನ : 15 ದಿನಗಳಲ್ಲಿ 50 ಲಕ್ಷ ನಷ್ಟ..!
ಈ ಮಧ್ಯೆಯೇ ಬೆಂಗಳೂರಿನಲ್ಲಿ ಮತ್ತೆ ವರುಣ ಸಿಂಚನ ಆರಂಭವಾಗಿದೆ. ಬೆಂಗಳೂರು ವಾತಾವರಣ ಕೂಲ್- ಕೂಲ್ ಆಗಿದ್ದು, ಬೆಳಗೆದ್ದು ಕೆಲಸಕ್ಕೆ ತೆರಳುವ ಮಂದಿಗೆ ಕೊಂಚ ಕಿರಿಕಿರಿ ಉಂಟು ಮಾಡುತ್ತಿದೆ.
ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆಯ ಸಿಂಚನವಾಗಿದೆ. ಹೀಗಾಗಿ ವಾಹನ ಸವಾರರಿಗೂ ತೊಂದರೆ ಆಗಿದೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ನಗರದ ಹಲವಡೆ ಮಂಜು ಮುಸುಕಿದೆ. ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ನಗರದಲ್ಲಿ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಷಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.