ಬೆಂಗಳೂರು: ಇಂದು ಕೂಡ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ವರುಣ ಆರ್ಭಟಿಸಿದ್ದಾರೆ. ನಗರದ ವಿವಿಧೆಡೆ ಇಂದು ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನತೆ ಮನೆಯಲ್ಲಿ ಮಿಂದು ಚಿಲ್ ಆಗಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದಂತ ಬೆಂಗಳೂರು ಜನತೆ ಮಳೆಯಿಂದಾಗಿ ಕೂಲ್ ಕೂಲ್ ಆಗಿದ್ದಾರೆ. ಇಂದು ಕೂಡ ವರುಣ ಆರ್ಭಟಿಸಿದ್ದಾನೆ. ನಗರದ ವಿವಿಧೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.
ಬೆಂಗಳೂರಿನ ಮತ್ತಿಕೆರೆ, ಹೆಬ್ಬಾಳ, ಸುಬ್ಬಯ್ಯ ಸರ್ಕಲ್, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆ ಆರ್ ಮಾರ್ಕೆಟ್, ಕಾರ್ಪೋರೇಷನ್, ಯಶವಂತಪುರ, ಕಮ್ಮನಹಳ್ಳಿ, ಜೆಪಿ ನಗರ, ಟ್ಯಾನರಿ ರಸ್ತೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು ಕಂಡು ಬಂದಿದೆ.
ಬೆಂಗಳೂರಿನ ಜನರೇ ಗಮನಿಸಿ: ‘BBMP ವಿದ್ಯುತ್ ವಿಭಾಗ’ದ ಅಧಿಕಾರಿ, ಸಿಬ್ಬಂದಿ ಕೆಲಸದ ಅವಧಿ ಬದಲಾವಣೆ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ