ಕಲಬುರ್ಗಿ : ಕಲ್ಬುರ್ಗಿಯಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಮಗನ ಸಾಧನೆ ನೋಡಲು ಬರುತ್ತಿದ್ದ ತಂದೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಆಳಂದದಲ್ಲಿ ನಡೆದಿದೆ. ಮಗ ಚಿನ್ನದ ಪದಕ ತೆಗೆದುಕೊಳ್ಳುವುದನ್ನು ನೋಡಲು ತಂದೆ ಒಬ್ಬರು ಬರುತ್ತಿದ್ದರು.
ಈ ವೇಳೆ ಆಟೋ ಪಲ್ಟಿ ಆಗಿ ತಂದೆ ಶಿವಕುಮಾರ್ ಶರ್ಮ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮೃತರನ್ನು ಶಿವಕುಮಾರ್ ಶರ್ಮಾ ಎಂದು ತಿಳಿದುಬಂದಿದೆ. ಶಿವಕುಮಾರ್ ಶರ್ಮ ಮಧ್ಯ ಪ್ರದೇಶದ ಉಜ್ಜಯಿನಿ ನಿವಾಸಿಯಾಗಿದ್ದಾರೆ. ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೋಗುವ ಸಂದರ್ಭದಲ್ಲಿ ಆಟೋ ಪಲ್ಟಿಯಾಗಿದೆ.
ಆಟೋ ಪಲ್ಟಿಯಾದ ಪರಿಣಾಮ ಶಿವಕುಮಾರ್ ಸ್ಥಳದಲ್ಲಿ ಸಾವನಪ್ಪಿದ್ದಾರೆ ನಿನ್ನೆ ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿಯಲ್ಲಿ 10ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಬಿ ಟೆಕ್ ವಿಭಾಗದಲ್ಲಿ ಪುತ್ರ ದಿಗ್ಯಾಂಶು ಶರ್ಮಾ ಎರಡು ಚಿನ್ನದ ಪದಕ ಪಡೆದಿದ್ದರು. ಹೀಗಾಗಿ ನೆನ್ನೆ ಘಟಿಕೋತ್ಸವದಲ್ಲಿ ಚಿನ್ನದ ಪತಕ ವಿತರಣೆ ನೋಡುವುದಕ್ಕೆ ಆಸೆಯಿಂದ ತಂದೆ ಬರುತ್ತಿದ್ದರು ಮಧ್ಯಪ್ರದೇಶದಿಂದ ಕಲಬುರ್ಗಿಗೆ ಬಂದಿದ್ದರು. ಈ ವೇಳೆ ದುರಾದೃಷ್ಟವಶಾತ್ ಆಟೋ ಪಲ್ಟಿಯಾಗಿ ಶಿವಕುಮಾರ ಶರ್ಮ ಸಾವನ್ನಪ್ಪಿದ್ದರೆ.








