ಕೋಲಾರ : ನದಿ ಆಗಿರಬಹುದು ಅಥವಾ ಕೃಷಿ ಹೋಂಡ ಆಗಿರಬಹುದು ಇನ್ ಯಾವುದೇ ನೀರಿನ ಸೆಲೆಯಲ್ಲಿ ಈಜಲು ತೆರಳಿದವರು ಮುಳುಗುತ್ತಿದ್ದನ್ನು ಕಂಡು ಯಾರಾದರೂ ಜೀವ ಉಳಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲಿ ಅಣ್ಣನೊಬ್ಬ ಕೃಷಿ ಹೊಂಡದಲ್ಲಿ ಮುಳುಗಿ ಈಜಲು ಬಾರದೆ ಮುಳುಗುತ್ತಿದ್ದರು ಕೂಡ ಆತನ ತಂಗಿಯೊಬ್ಬಳು ವಿಡಿಯೋ ಮಾಡುತ್ತಿದ್ದಳು. ಆದರೆ ದುರಾದೃಷ್ಟವಶಾತ್ ಆ ಯುವಕ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೃತ ಯುವಕನನ್ನು ಗೌತಮ್ ಗೌಡ (26) ಎಂದು ಗುರುತಿಸಲಾಗಿದೆ. ಈತ ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿಯಾಗಿದ್ದಾರೆ.ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು.
ಈ ವೇಳೆ ಗೌತಮ್ ತಂಗಿ ವಿಡಿಯೋ ಮಾಡುತ್ತಿದ್ದಳು ಆದರೆ ಅಣ್ಣ ಈಜುತ್ತಿದ್ದಾನೆ ಎಂದು ತಿಳಿದುಕೊಂಡು ಆಕೆ ವಿಡಿಯೋ ಮಾಡುವುದನ್ನು ಮುಂದುವರಿಸಿದಳು. ಆದರೆ ಅಣ್ಣ ಮುಳುಗುತ್ತಿರುವುದು ಆಕೆಗೆ ಕಂಡು ಬಾರದೆ ಇರುವುದರಿಂದ ದುರಾದೃಷ್ಟವಶಾತ್ ಗೌತಮ್ ಮುಳುಗಿ ಸಾವನ್ನಪ್ಪಿದ್ದಾನೆ.