ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮತ್ತಿ ಹಣ್ಣು,ಕಮರಾಕ್ಷಿ ಹಣ್ಣು (ಅರ್ಜುನ ಹಣ್ಣು) ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸಾಮಾನ್ಯವಾಗಿ ರುಚಿಯಲ್ಲಿ ಬದಲಾವಣೆ ತರಲು ಸೇವಿಸಲಾಗುತ್ತದೆ. ಆದರೆ ಇದು ರುಚಿಯಲ್ಲಿ ಮಾತ್ರವಲ್ಲದೆ ಅನೇಕ ಬಗೆಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಅರ್ಜುನ ಹಣ್ಣಿನಲ್ಲಿ ಪ್ರೋಟೀನ್ ಮತ್ತು ಮಿನರಲ್ ಗಳಂತಹ ಹಲವು ರೀತಿಯ ವಿಟಮಿನ್ ಗಳು ಸಮೃದ್ಧವಾಗಿವೆ. ಇದರ ಎಲೆಗಳು, ತೊಗಟೆ ಮತ್ತು ಬೇರು ಕೂಡ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಈ ಹಣ್ಣಿನ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತೊಡೆದುಹಾಕಲು ತುಂಬಾ ಪ್ರಯೋಜನಕಾರಿಯಾಗಿದೆ.
ಇದರ ಸೇವನೆಯಿಂದ ಗ್ಯಾಸ್, ಅಜೀರ್ಣದಂತಹ ಹಲವು ಸಮಸ್ಯೆಗಳು ದೂರವಾಗುತ್ತವೆ..ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ರೋಗಗಳನ್ನು ಹೋಗಲಾಡಿಸಲು ನೀವು ಬಯಸಿದರೆ ಅರ್ಜುನ ಹಣ್ಣಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.
ಇದರ ಸೇವನೆಯಿಂದ ಮೊಡವೆ, ಕಲೆಗಳು, ಕಪ್ಪು ಕಲೆಗಳಂತಹ ಸಮಸ್ಯೆಗಳೂ ನಿವಾರಣೆಯಾಗುತ್ತವೆ.ಹೃದಯದ ಆರೋಗ್ಯವನ್ನು ಆರೋಗ್ಯವಾಗಿಡಬೇಕೆಂದರೆ. ಅರ್ಜುನ ಹಣ್ಣಿನ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಉರಿಯೂತ ತಡೆಗಟ್ಟಲು ಸಹಾಯಕ
ವಿಟಮಿನ್ ಸಿ ಯುಕ್ತ ಹಣ್ಣಾಗಿರುವುದರಿಂದ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ದೇಹದಲ್ಲಿ ಸೇರಿಕೊಂಡಿರುವ ವಿಷಕಾರಿ ಅಂಶವನ್ನು ಹೊರಹಾಕಲು ವಿಟಮಿನ್ ಸಿ ಯುಕ್ತ ಹಣ್ಣುಗಳು ಸಹಾಯ ಮಾಡುತ್ತವೆ. ಮೂಳೆಗಳು, ಸ್ನಾಯುಗಳನ್ನು ಬಲಿಷ್ಠವಾಗಿರಿಸಲು ಸಹಾಯಕವಾಗಿದೆ.
ಹೃದಯಕ್ಕೆ ಒಳ್ಳೆಯದು
ರಕ್ತದೊತ್ತಡವನ್ನು ನಿಯಂತ್ರಿಸುವ ಸೋಡಿಯಂ ಮತ್ತು ಪೊಟ್ಯಾಷಿಯಮ್ನಂತಹ ಖನಿಜಾಂಶಗಳು ಕಮರಾಕ್ಷಿ ಹಣ್ಣಿನಲ್ಲಿ ತುಂಬಿರುತ್ತವೆ. ಕ್ಯಾಲ್ಸಿಯಮ್ ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಈ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ.
ತೂಕ ನಿಯಂತ್ರಣ
ಸಕ್ಕರೆ ಅಂಶ ಕಡಿಮೆ ಇರುವುದರಿಂದ ತೂಕ ಹೆಚ್ಚಾಗುವುದರ ಬಗ್ಗೆ ಚಿಂತಿಸದೇ ಕಮರಾಕ್ಷಿ ಹಣ್ಣನ್ನು ಸೇವಿಸಬಹುದು. ಪೈಬರ್ ಅಂಶವನ್ನು ಹೊಂದಿರುವುದರಿಂದಾಗಿ ಪಚನ ಕ್ರಿಯೆ ಸರಾಗವಾಗಿ ಆಗಲು ಸಹಾಯಕವಾಗುತ್ತದೆ. ಅತಿ ಹೆಚ್ಚಾದ ಕ್ಯಾಲೋರಿ ಇಲ್ಲದಿರುವುದರಿಂದ ತೂಕ ಹೆಚ್ಚಾಗುವುದಿಲ್ಲ.
ಕೂದಲುದುರುವ ಸಮಸ್ಯೆ ನಿವಾರಣೆ
ಕಮರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಬಿ ಮತ್ತು ಸಿ ಜತೆಗೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಕೂದಲಿನ ಕೋಶಗಳನ್ನು ಸದೃಢಪಡಿಸುತ್ತದೆ. ಇದರಿಂದ ಹೊಳೆಯುವ ಕೂದಲು ಮತ್ತು ಕಾಂತಿಯುತ ಚರ್ಮವನ್ನು ಪಡೆಬಹುದಾಗಿದೆ.
‘ಓಲಾ, ಊಬರ್’ಗೆ ‘ಸಾರಿಗೆ ಇಲಾಖೆ’ ಬಿಗ್ ಶಾಕ್: ದುಬಾರಿ ದರ ವಸೂಲಿ ಮಾಡಿದ್ರೇ ಜಪ್ತಿ | Ola, Uber Taxi