ಪಾವಗಡ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಕೋಲಾಟ ನಡೆಸಿದ ಮಕ್ಕಳ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ ಪಾವಗಡ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ನಾಗಲಮಡಿಕೆಯಿಂದ ವಾಪಸ್ ಬರುವಾಗ ರಸ್ತೆಯಲ್ಲಿ ಕೋಲಾಟ ಪ್ರದರ್ಶಿಸಿ ನನ್ನ ಪ್ರಯಾಣದ ಆಯಾಸ ತಣಿಸಿದ ಈ ಮಕ್ಕಳಿಗೆ ಆಭಾರಿ. ಪಾವಗಡ ತಾಲೂಕಿನ ಕೋಡಿಬಂಡೆ ಗ್ರಾಮದ ಈ ಮಕ್ಕಳಿಗೆ ನನ್ನ ಶುಭ ಹಾರೈಕೆಗಳು ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಪಾವಗಡ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ನಾಗಲಮಡಿಕೆಯಿಂದ ವಾಪಸ್ ಬರುವಾಗ ರಸ್ತೆಯಲ್ಲಿ ಕೋಲಾಟ ಪ್ರದರ್ಶಿಸಿ ನನ್ನ ಪ್ರಯಾಣದ ಆಯಾಸ ತಣಿಸಿದ ಈ ಮಕ್ಕಳಿಗೆ ಆಭಾರಿ.
ಪಾವಗಡ ತಾಲೂಕಿನ ಕೋಡಿಬಂಡೆ ಗ್ರಾಮದ ಈ ಮಕ್ಕಳಿಗೆ ನನ್ನ ಶುಭ ಹಾರೈಕೆಗಳು.#ಪಂಚರತ್ನ_ರಥಯಾತ್ರೆ #ಪಾವಗಡ pic.twitter.com/mqy9fkFy3J
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 4, 2022
ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಮಳೆ’ ಮುನ್ನೆಚ್ಚರಿಕೆ |Rain Alert Karnataka