ಹಾಸನ: ಲೈಂಗಿಕ ದೌರ್ಜನ್ಯ, ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು, ಬೇಲ್ ನಲ್ಲೇ ಅಲೆದಾಡಿ, ಜಾಮೀನು ಪಡೆದ ಬಳಿಕ 20 ದಿನಗಳ ನಂತರ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಇಂದು ಹಾಸನದಕ್ಕೆ ಭೇಟಿ ನೀಡಿದರು. ಆದರೆ ಈ ವೇಳೆ ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ಭೇಟಿ ನೀಡುವ ಬದಲು ದಿಢೀರ್ ಆಗಿ ಮೈಸೂರಿನತ್ತ ಪಯಣ ಬೆಳೆಸಿದ್ದಾರೆ.
ಹೌದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಮಹಿಳೆ ಅಪಹರಣ ಕೇಸಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಬಳಿಕ ಟೆಂಪಲ್ ರನ್ ಕೂಡ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಡೆಸಿದ್ದರು.
ಇಂದು 20 ದಿನಗಳ ಬಳಿಕ ಅವರು ಹಾಸನ ಜಿಲ್ಲೆಗೆ ಎಂಟ್ರಿಕೊಟ್ಟಿದ್ದಾರೆ. ಹಾಸನದ ಹೊಳೆನರಸೀಪುರಕ್ಕೆ ಬರೋ ದಾರಿಯುದ್ಧಕ್ಕೂ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕಿರಿಸಾವೆಯಲ್ಲಿ ಕಾರ್ಯಕರ್ತರ ಸ್ವಾಗತಕ್ಕೆ ಹೆಚ್.ಡಿ ರೇವಣ್ಣ ಭಾವುಕರಾದರು. ಜೊತೆಗೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾರಿನಿಂದ ಕೆಳಗೆ ಇಳಿದು, ನಮಸ್ಕರಿಸಿ ತೆರಳಿದ್ದಾರೆ ತಿಳಿದು ಬಂದಿದೆ.
ಈ ವೇಳೆ ಹೊಳೆನರಸೀಪುರ ಪ್ರಯಾಣವನ್ನು ರದ್ದುಗೊಳಿಸಿ ದಿಡೀರ್ ಪ್ರಯಾಣ ಬದಲಿಸಿದ್ದಾರೆ. ಹೊಳೆನರಸೀಪುರದ ಬದಲು ಮೈಸೂರಿನ ಪ್ರಯಾಣ ಬೆಳೆಸಿದ್ದಾರೆ. ರೇವಣ್ಣ ಆಗಮನಕ್ಕಾಗಿ ನೂರಾರು ಜನರು ಕಾದು ನಿಂತಿದ್ದರು. ರೇವಣ್ಣ ಮೈಸೂರಿನತ್ತ ತೆರಳಿದಾಗ ಬಂದಂತಹ ನೂರಾರು ಜನರು ನಿರಾಶೆಯಿಂದ ವಾಪಸಾದರು.