ಬೆಂಗಳೂರು : ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರವೇ ಕೆಲವು ಸಂಘಟನೆಗಳಿಗೆ ತ್ರಿಶೂಲ ಕೊಟ್ಟು ಮೆರವಣಿಗೆ ಮಾಡಿ ತರಬೇತಿ ನೀಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ ಆರ್ ಎಸ್ ಎಸ್ ಹಾಗೂ ಪಿಎಫ್ಐ ನಡುವೆ ಕ್ಯಂಪಾರಿಸನ್ ಮಾಡುವುದು ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಒಂದು ಸಂಘಟನೆಗೆ ಮಾತ್ರ ಯಾಕೆ ಸರ್ಕಾರ ತ್ರಿಶೂಲ, ಲಾಟಿ ಕೊಟ್ಟು ತರಬೇತಿ ಕೊಡುತ್ತಿದೆ , ಇದು ಏನು ಸಂದೇಶ ಕೊಡುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಒಂದು ಸಂಘಟನೆಗೆ ಮಾತ್ರ ಯಾಕೆ ಸರ್ಕಾರ ತ್ರಿಶೂಲ, ಲಾಟಿ ಕೊಟ್ಟು ಮೆರವಣಿಗೆ ಮಾಡುತ್ತೀರಿ..? ಅದಕ್ಕೆ ನೀವು ಪ್ರೋತ್ಸಾಹ ಕೊಡುತ್ತೀರಿ..ಈ ಹಿಂದೆ ಗಾಂಧೀಜಿಯನ್ನು ಹತ್ಯೆ ಮಾಡಿದಾಗ ಸಂಘಟನೆ ಒಂದನ್ನು ಬ್ಯಾನ್ ಮಾಡಲಾಗಿತ್ತು, ಈಗಲೂ ಕೂಡ ಯಾವ ಕಾರಣಕ್ಕೆ ಬ್ಯಾನ್ ಮಾಡಬೇಕು ಎಂಬುದನ್ನು ಜನರ ಮುಂದೆ ಹೇಳಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.