ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಎಸ್ಸಿ , ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ಶಾಳಿ ನಡೆಸಿದ್ದು, ಇದೊಂದು ಗಿಮಿಕ್, ಸ್ಟಂಟ್ ಎಂದಿದ್ದಾರೆ.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು ಮಾತ್ರ. ದೇವೇಗೌಡ (HD Devegowda) ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ , ಇದೊಂದು ಚುನಾವಣೆ ಸ್ಟಂಟ್ ಅಷ್ಟೆ ಎಂದರು,
ಎಸ್ಸಿ-ಎಸ್ಟಿ ಮೀಸಲಾತಿ ಕೊಡೋಕೆ ನಮ್ಮ ಗಂಡೆದೆ ಸಿಎಂ ಬೊಮ್ಮಾಯಿಯಿಂದ ಮಾತ್ರ ಆಯಿತು ಎನ್ನುವ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ವಿಚಾರದಲ್ಲಿ ಈಗ ಏನಾಗಿದೆ. ಗಂಡೆದೆ ಮುಖ್ಯಮಂತ್ರಿ ಆಗಿದ್ದವರು ಎರಡು ವರ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದು ವಾಗ್ಧಾಳಿ ನಡೆಸಿದರು. ಎಸ್ಟಿ ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು ಮಾತ್ರ. ದೇವೇಗೌಡ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ ಎಂದರು.
500 ರೂಪಾಯಿ ನೋಟಿನಲ್ಲಿ ಮೂಡಿ ಬಂದ ʻಪ್ರಧಾನಿ ನರೇಂದ್ರ ಮೋದಿʼ ಭಾವಚಿತ್ರ | PM Modi On 500-Rupee Note
BIGG NEWS: ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಲ್ಲ: ಶ್ರೀರಾಮುಲು