ಬೆಂಗಳೂರು : ಟಿಪ್ಪು ಜಯಂತಿ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಟ್ವೀಟ್ ಮಾಡುವ ಮೂಲಕ ಟಿಪ್ಪು ಸುಲ್ತಾನ್ ನನ್ನು ಸ್ಮರಿಸಿದ್ದಾರೆ.
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಟಿಪ್ಪು ಸುಲ್ತಾನರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಹೆಸರುವಾಸಿಯಾದ ಟಿಪ್ಪುರವರನ್ನು ಇಂದು ಸ್ಮರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ಟಿಪ್ಪು ಜಯಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್ ಮೂಲಕ ಶುಭಾಶಯ ಕೋರಿದ್ದಾರೆ. ಟಿಪ್ಪು ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ ಎಂದು ಹೇಳಿದ್ದಾರೆ.ಇಂದು ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ತಿಳಿಸಿದ್ದಾರೆ.
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಶ್ರೀ ಟಿಪ್ಪು ಸುಲ್ತಾನರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಹೆಸರುವಾಸಿಯಾದ ಟಿಪ್ಪುರವರನ್ನು ಇಂದು ಸ್ಮರಿಸೋಣ. pic.twitter.com/Q7O7TyXn7J
— H D Devegowda (@H_D_Devegowda) November 10, 2022
BREAKING NEWS : ‘PSI’ ಅಕ್ರಮ ನೇಮಕಾತಿ ಪ್ರಕರಣ : ಕಳಂಕಿತ ಎಡಿಜಿಪಿ ಅಮೃತ್ ಪಾಲ್ ಮನೆ ಮೇಲೆ ಇ.ಡಿ. ದಾಳಿ |E.D Raid