ಬೆಂಗಳೂರು: ರಾಜ್ಯದ ವಿವಿಧ ಶಾಲೆಗಳಲ್ಲಿ ಖಾಲಿ ಇದ್ದಂತ 15,000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ( Karnataka Recruitment of Graduate School Teachers ) 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಈ ಆಯ್ಕೆ ಪಟ್ಟಿಗೆ ಹೈಕೋರ್ಟ್ ( Karnataka High Court ) ತಡೆಯಾಜ್ಞೆ ನೀಡಿದೆ.
ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದಂತ 15 ಸಾವಿರ ಪದವೀಧದ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. 15 ಸಾವಿರ ಹುದ್ದೆಗಳಿಗೆ 13,363 ಅಭ್ಯರ್ಥಿಗಳು ಮಾತ್ರವೇ ಆಯ್ಕೆಯಾಗಿದ್ದರು. ಇನ್ನೂ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದೇ ಖಾಲಿ ಉಳಿದಿದ್ದವು.
BIGG NEWS: ಚಾಮರಾಜನಗರದಲ್ಲಿ ಜೀಪ್ನಿಂದ ಬಿದ್ದು ಸಾವು ಪ್ರಕರಣ: ಮೂವರು ಪೊಲೀಸರ ವಿರುದ್ಧ FIR
ಶಿಕ್ಷಣ ಇಲಾಖೆ ಪ್ರಕಟಿಸಿದಂತ ಪದವೀಧ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಅಕ್ಷತ ಚೌಗಲೆ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಪರವಾಗಿ ಲತಾ ಶೆಟ್ಟಿ ಎಂಬುವಂತ ವಕೀಲರು ವಾದಿಸಿದ್ದರು.
ದಿನಾಂಕ 28-11-2022ರಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಎವರನ್ನು ಒಳಗೊಂಡಂತ ನ್ಯಾಯಪೀಠವು, ಮುಂದಿನ ಆದೇಶದವರೆಗೆ ದಿನಾಂಕ 18-11-2022ರಂದು ಪ್ರಕಟಿಸಿರುವಂತ 1:1 ತಾತ್ಕಾಲಿಕ ಶಿಕ್ಷಕರ ಆಯ್ಕೆ ಪಟ್ಟಿಗೆ ತಡೆಯಾಜ್ಞೆಯನ್ನು ನೀಡಿ, ಆದೇಶಿಸಿದ್ದಾರೆ.
BIG BREAKING NEWS: 1.55 ಲಕ್ಷ ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ | New Ration Card
ಅಂದಹಾಗೇ, 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ದಿನಾಂಕ 21-03-2022ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆನ್ ಲೈನ್ ಮೂಲಕ ದಿನಾಂಕ 21-03-2022 ರಿಂದ 22-04-2022ರವರೆಗೆ ಅವಕಾಶ ನೀಡಲಾಗಿತ್ತು ಎಂದು ಶಿಕ್ಷಣ ಇಲಾಖೆಯು ಹೇಳಿತ್ತು.
ಇನ್ನೂ 15,000 ಶಾಲಾ ಶಿಕ್ಷಕರ ಹುದ್ದೆಗಳಿಗಾಗಿ ಒಟ್ಟು 1,16,223 ಮಂದಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 21-05-2022 ಹಾಗೂ 22-05-2022ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ 68,849 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 51,098 ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿದ್ದರು ಎಂದು ತಿಳಿಸಿತ್ತು.
BIGG NEWS : ಡಿಜಿಟಲ್ ಜೀವಂತ ಪ್ರಮಾಣ ಪತ್ರ : `EPFO’ ಪಿಂಚಣಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಸ್ಪರ್ಧಾತ್ಮಕ ಪರೀಕ್ಷೆಯ ಬಳಿಕ 1:2 ಅನುಪಾತದಂತೆ 22,432 ಅಭ್ಯರ್ಥಿಗಳ ದಾಖಲಾತಿಯನ್ನು ಪರಿಶೀಲನೆ ನಡೆಸಲಾಯಿತು. ಇಂದು 1:1 ಅನುಪಾತದಂತೆ ಆಯ್ಕೆಯಾಗಿರುವಂತ 13,363 ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿಯ ಬಗ್ಗೆ ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಲು ದಿನಾಂಕ 19-11-2022 ರಿಂದ 23-11-2022ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದಿತ್ತು.
ವಿಷಯವಾರು 1:1 ಪಟ್ಟಿಯಲ್ಲಿ ಆಯ್ಕೆಯಾದ ಹುದ್ದೆಗಳ ವಿವರ
- ಆಂಗ್ಲಭಾಷೆಯ 1,807 ಹುದ್ದೆಗಳಿಗೆ 1,768 ಮಂದಿ ಆಯ್ಕೆಯಾಗಿದ್ದಾರೆ.
- ಗಣಿತ ಮತ್ತು ವಿಜ್ಞಾನ ಹುದ್ದೆಗೆ 6,500ರಲ್ಲಿ 5,450 ಮಂದಿ ಆಯ್ಕೆ
- ಸಮಾಜ ಪಾಠ 4,693 ಹುದ್ದೆಗಳಿಗೆ 4,521 ಮಂದಿ ಆಯ್ಕೆ
- ಜೀವ ವಿಜ್ಞಾನ ವಿಷಯದ 2000 ಹುದ್ದೆಗಳಿಗೆ 1,624 ಮಂದಿ ಆಯ್ಕೆಯಾಗಿದ್ದರು.