ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸ ಮತ್ತು ಮಾಂಸ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿರ್ಬಂಧ/ ನಿಷೇಧ ಹೇರುವಂತೆ ಕೋರಿ ಜೈನ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಬಗ್ಗೆ ಬಾಂಬೆ ಹೈಕೋರ್ಟ್ ಸೋಮವಾರ ತರಾಟೆಗೆ ತಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠವು ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಮತ್ತು ನಿಷೇಧಗಳನ್ನು ವಿಧಿಸುವ ಕಾನೂನು / ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ. “ಮೊದಲನೆಯದಾಗಿ, ಇದು ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂದು ನಮಗೆ ಹೇಳಿ? ಏನನ್ನಾದರೂ ನಿಷೇಧಿಸಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವಂತೆ ನೀವು ಉಚ್ಚ ನ್ಯಾಯಾಲಯವನ್ನು ಕೇಳುತ್ತಿದ್ದೀರಿ. ಇದನ್ನು ನಿರ್ಧರಿಸುವುದು ಶಾಸಕಾಂಗಕ್ಕೆ ಬಿಟ್ಟಿದ್ದು’ ಎಂದು ನ್ಯಾಯಪೀಠ ಹೇಳಿದೆ. ಹೈಕೋರ್ಟ್ ಆಗಿ, ಯಾವುದೇ ಹಕ್ಕಿನ ಉಲ್ಲಂಘನೆಯಾದಾಗ ಮಾತ್ರ ನಾವು ಮಧ್ಯಪ್ರವೇಶಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಅಂತಹ ನಿಷೇಧವನ್ನು ಕೋರುವ ಮೂಲಕ ಅರ್ಜಿದಾರರು ಇತರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅತಿಕ್ರಮಿಸುತ್ತಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
BIGG NEWS : ಮೀಸಲಾತಿ ವಿಚಾರ : ಬಿಜೆಪಿಯಿಂದ ಬೆಂಗಳೂರಿನಲ್ಲಿ ಅ.8 ರಂದು ಸರ್ವಪಕ್ಷಗಳ ಸಭೆ |ST Reservation
BREAKING NEWS: ಚಿಕ್ಕಮಗಳೂರಿನಲ್ಲಿ ತಲ್ಲಣ ಸೃಷ್ಠಿಸಿದ ‘ಜಿಹಾದ್ ಬರಹ’: ಬೆಚ್ಚಿಬಿದ್ದ ‘RSS ಮುಖಂಡ’
ಹೊಸ ‘BPL ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು, ಆದ್ರೇ ಕಾರ್ಡ್ ಮಾತ್ರ ಕೇಳಬೇಡಿ – ಆಹಾರ ಇಲಾಖೆ | Ration Card