ಬೆಂಗಳೂರು : ರಾಜ್ಯ ವಿದ್ಯುತ್ ಪ್ರಸರಣ ನಿಗಮವು ಒಂದು ಯಡವಟ್ಟು ಮಾಡಿಕೊಂಡಿದ್ದು, ನಿವೃತ್ತ ಹಿರಿಯ ಸಹಾಯಕಿಗೆ ಪತಿಯೊಬ್ಬರು ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ ನಿವೃತ್ತ ಮಹಿಳಾ ನೌಕರರೊಬ್ಬರಿಗೆ 90 ದಿನಗಳ ಹೆರಿಗೆ ರಜೆಯ ಭತ್ಯೆ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಶೇ.8 ರಷ್ಟು ಬಡ್ಡಿದರಲ್ಲಿ ಭತ್ಯೆ ಪಾವತಿಸಲು ತಾಕೀತು ಮಾಡಿದೆ.
ರಾಜ್ಯದ ‘ಪಡಿತರ ವಿತರಕ’ರಿಗೆ ಗುಡ್ ನ್ಯೂಸ್: ಪ್ರತಿ ಕೆಜಿ ಅಕ್ಕಿಗೆ ‘ಕಮೀಷನ್ ಮೊತ್ತ ರೂ.1.50’ ಹೆಚ್ಚಳ
ಹೆರಿಗೆ ರಜೆಯ ಭತ್ಯೆಯನ್ನು ತಡೆ ಹಿಡಿದಿದ್ದ ನಿಗಮದ ಕ್ರಮ ಆಕ್ಷೇಪಿಸಿ ನಿವೃತ್ತ ಹಿರಿಯ ಸಹಾಯಕಿ ಎ.ಆಲಿಸ್ (71) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಆದೇಶ ಮಾಡಿದೆ. ಅರ್ಜಿದಾರರು ಕೆಪಿಟಿಸಿಎಲ್ ಹಿರಿಯ ಸಹಾಯಕಿಯಾಗಿ 2013ರಲ್ಲಿ ನಿವೃತ್ತರಾಗಿದ್ದರು. 1983ರಲ್ಲಿ ಸೇವೆಯಲ್ಲಿದ್ದಾಗ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು.ನಿವೃತ್ತಿಯ ನಂತರವೂ ಅವರಿಗೆ ಹರಿಗೆ ರಜೆಯ ಭತ್ಯೆ ಪಾವತಿಸಿರಲಿಲ್ಲ. ಇದರಿಂದ ಅವರು ಭತ್ಯೆ ಮಂಜೂರಾತಿಗೆ ಕೋರಿದ್ದರು.
ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ರಾಜ್ಯಾದ್ಯಂತ ‘1124’ ಕೇಂದ್ರ ‘6.98’ ಲಕ್ಷ ವಿದ್ಯಾರ್ಥಿಗಳು ಭಾಗಿ
ಹೆರಿಗೆ ಭತ್ಯೆ ಪಾವತಿಸಬೇಕಾದರೆ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಸರ್ಕಾರಿ ಉದ್ಯೋಗಿ (ಸಂಗಾತಿ) ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಕರ್ನಾಟಕ ಸಿವಿಲ್ ಸರ್ವೀಸ್ ಕಾಯ್ದೆ-1983ರ ನಿಯಮ 130 ಹೇಳುತ್ತದೆ. ಅರ್ಜಿದಾರೆಯ ಪತಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿಲ್ಲ ಎಂದು ತಿಳಿಸಿ ಭತ್ಯೆ ಮಂಜೂರಾತಿಗೆ ನಿರಾಕರಿಸಿ 2014ರಲ್ಲಿ ನಿಗಮ ಹಿಂಬರಹ ನೀಡಿತ್ತು. ಇದರಿಂದ 2014ರಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ, ತಾನು ಸಂತಾಹರಣ ಚಿಕಿತ್ಸೆಗೆ ಒಳಾಗಿರುವುದಾಗಿ ತಿಳಿಸಿದ್ದೆ. ಹೀಗಿದ್ದರೂ ಪತಿಯ ಕಾರಣ ನೀಡಿ ಭತ್ಯೆ ಮಂಜೂರು ಮಾಡಿಲ್ಲ ಎಂದು ಆಕ್ಷೇಪಿಸಿದ್ದರು.
‘ರಾಜ್ಯ ಸರ್ಕಾರ’ದಿಂದ ‘ಮೇವಿನ ಖರೀದಿ, ಸಾಗಣಿಕೆ ದರ’ ಪರಿಷ್ಕರಿಸಿ ಆದೇಶ: ಹೀಗಿದೆ ಪರಿಷ್ಕೃತ ದರ