ಬೆಂಗಳೂರು: ಕಾಂಗ್ರೆಸ್ ಪಕ್ಷದ ( Congress Party ) ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅನುಮತಿ ಪಡೆಯದೇ ಕೆಜಿಎಫ್-2 ಚಿತ್ರದ ( KGF-2 Movie ) ಹಾಡನ್ನು ದುರ್ಬಳಕೆ ಮಾಡಿದಂತ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ಟ್ವಿಟ್ಟರ್ ( Congress Twitter ) ಖಾತೆಗೆ ನಿರ್ಬಂಧ ಕೂಡ ಹೈಕೋರ್ಟ್ ವಿಧಿಸಿತ್ತು. ಇದೀಗ ಈ ನಿರ್ಬಂಧವನ್ನು ತೆಗೆಯುವಂತೆ ಕಾಂಗ್ರೆಸ್ ಹೈಕೋರ್ಟ್ ಗೆ ( Karnataka High Court ) ಮನವಿ ಮಾಡಿದೆ. ಅಲ್ಲದೇ ಕೆಜಿಎಫ್-2 ಹಾಡನ್ನು ತೆಗೆಯುವುದಾಗಿಯೂ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ, ಭಾರತ್ ಜೋಡೋ ಯಾತ್ರೆಯ ಟ್ವಿಟ್ಟರ್ ಖಾತೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ.
ಈ ಕುರಿತಂತೆ ಕರ್ನಾಟಕ ಹೈಕೋರ್ಟ್ ಗೆ ( Karnataka High Court ) ಅರ್ಜಿಯಲ್ಲಿ ಮನವಿ ಮಾಡಿಕೊಂಡಿರುವಂತ ಕಾಂಗ್ರೆಸ್ ಪಕ್ಷದ ಪರ ವಕೀಲರು, ಟ್ವಿಟ್ಟರ್ ಹ್ಯಾಂಡಲ್ ನಿಂದ ಕೆಜಿಎಫ್-2 ಚಿತ್ರದ ಹಾಡನ್ನು ತೆಗೆಯುತ್ತಿದ್ದೇವೆ. ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್ ನಿರ್ಬಂಧಕ್ಕೆ ತಡೆ ನೀಡಬೇಕು ಎಂದು ಕೋರಿ ಕೊಂಡಿದೆ.
BIG NEWS: ನ.11ರಿಂದ 13ರವರೆಗೆ ‘ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ’: ‘ಶಾಲಾ-ಕಾಲೇಜು ಶಿಕ್ಷಕ’ರಿಗೆ OODಗೆ ಅನುಮತಿ
ಭಾರತ್ ಜೋಡೋ ಯಾತ್ರೆ ಟ್ವಿಟ್ಟರ್ ಗೆ ನಿರ್ಬಂಧ ಸರಿಯಲ್ಲ. ಹೀಗಾಗಿ ಆದೇಶದ ಈ ಭಾಗಕ್ಕೆ ತಡೆ ನೀಡುವಂತೆ ಮನವಿ ಮಾಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಪರ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿರುವಂತ ಹೈಕೋರ್ಟ್ ನ್ಯಾಯಪೀಠವು ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಟ್ವಿಟ್ಟರ್ ಖಾತೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ.
BIG NEWS: ವರ್ಷದ ಕೊನೆಯ ಚಂದ್ರಗ್ರಹಣ ಆರಂಭ: ವಿಶ್ವದ ಹಲವೆಡೆ ಗೋಚರ | Lunar Eclipse 2022