ಬೆಂಗಳೂರು: 2016ರಲ್ಲಿ ಸುಪ್ರೀಂ ಕೋರ್ಟ್ ( Supreme Court ) ಎಫ್ಐಆರ್ ದಾಖಲಾದ 24 ಗಂಟೆಯಲ್ಲಿ ಅದನ್ನು ಸಂಬಂಧ ಪಟ್ಟ ಅಧಿಕೃತ ವೆಬ್ ಸೈಟ್ ನಲ್ಲಿ ( Website ) ಪ್ರಕಟಿಸಬೇಕು ಎಂಬುದಾಗಿ ಆದೇಶಿಸಿತ್ತು. ಆದ್ರೇ ಲೋಕಾಯುಕ್ತ ( Karnataka Lokayukta ) ಮಾತ್ರ ಇದಕ್ಕೆ ಡೋಂಟ್ ಕೇರ್ ಎನ್ನುವಂತೆ ದಾಖಲಿಸದೇ ಕೋರ್ಟ್ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಹೈಕೋರ್ಟ್ ನಲ್ಲಿ ( High Court ) ಸಲ್ಲಿಕೆಯಾಗಿದ್ದಂತ ಪಿಐಎಲ್ ನಲ್ಲಿ ಲೋಕಾಯುಕ್ತಕ್ಕೆ ನೋಟಿಸ್ ನೀಡಿ, ಚಾಟಿ ಬೀಸಿದೆ.
ವಕೀಲ ಎಸ್ ಉಮಾಪತಿ ಎಂಬುವರು ಕರ್ನಾಟಕ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾದ 24 ಗಂಟೆಯಾದರೂ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಿಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.
BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ ; ‘ದಾದಾ’ ಹೇಳಿದ್ದೇನು ಗೊತ್ತಾ?
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಂತ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಲೆ ಅವರಿದ್ದಂತ ವಿಭಾಗೀಯ ಪೀಠವು, ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಲೋಕಾಯುಕ್ತ ಎಡಿಜಿಪಿಗೆ ನೋಟಿಸ್ ಜಾರಿಗೊಳಿಸಿದೆ. ಈ ಬಳಿಕ ನವೆಂಬರ್ 9ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಅಂದಹಾಗೇ 2016ರಲ್ಲಿ ಸುಪ್ರೀಂ ಕೋರ್ಟ್ ಎಫ್ಐಆರ್ ದಾಖಲಾದ 24 ಗಂಟೆಯಲ್ಲಿ ಆ ಪ್ರತಿಯನ್ನು ಸಂಬಂಧ ಪಟ್ಟ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂಬುದಾಗಿ ಆದೇಶಿಸಿತ್ತು. ಈ ಆದೇಶವನ್ನು ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಆದ್ರೇ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತಕ್ಕೆ ಅಧಿಕಾರ ಮರುಸ್ಥಾಪಿಸಿದ ಬಳಿಕ, ಲೋಕಾಯುಕ್ತದಲ್ಲಿ ಈ ನಿಯಮ ಪಾಲಿಸುತ್ತಿರಲಿಲ್ಲ. ಹೀಗಾಗಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು.