ಬೆಂಗಳೂರು: ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ 6, 7 ಮತ್ತು 8ರಂದು ನಡೆಯಲಿದೆ.
ಸಮ್ಮೇಳನ ನಡೆಯುವ ದಿನಗಳಂದು ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ. ಹಾವೇರಿ ಜಿಲ್ಲಾ ಸಂಚಾರಿ ಪೋಲಿಸರು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ, ಸಂಚಾರ ಮಾರ್ಗಸೂಚಿಯನ್ನು ಗುಗಲ್ ಮ್ಯಾಪ್ನಲ್ಲಿ ನೋಡಬಹುದಾಗಿದ್ದು, ಇದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಅದೇ ರೀತಿ ಸಂಚಾರ ಮಾರ್ಗಸೂಚಿಯನ್ನು ಕೂಡ ಪೊಲೀಸರು ಬಿಡುಗಡೆ ಮಾಡಿದ್ದು, ಹಾವೇರಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನ, ಸಮ್ಮೇಳನದ ಸ್ಥಳಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.ಹುಬ್ಬಳ್ಳಿ ಮಾರ್ಗದಿಂದ ಬರುವ ವಿವಿಐಪಿಗಳ ಕಾರ್ ನಿಲುಗಡೆಗಾಗಿ ಹುಬ್ಬಳ್ಳಿ ಬೈಪಾಸ್ನಲ್ಲಿಯೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಹಾಗೂ ಕೆ.ಎಲ್.ಇ ಶಾಲೆಯ ಆವರಣದಲ್ಲಿ ಗಣ್ಯರಿಗಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಹುಬ್ಬಳ್ಳಿ ಮಾರ್ಗದಿಂದ ಬರುವ ವಾಹನಗಳನ್ನು ಹಾನಗಲ್ ಬೈಪಾಸ್ನಿಂದ ಹಾವೇರಿ ನಗರಕ್ಕೆ ಬರಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಸಮ್ಮೇಳನದ ಸ್ಥಳದ ಸುತ್ತಲು ಕೆ.ಎಸ್.ಆರ್.ಟಿ.ಸಿ ಬಸ್ಗಳ ಸಂಚಾರ ಹಾಗೂ ನಿಲುಗಡೆಯಾಗಲಿದೆ. ಇವೆಲ್ಲವನ್ನು ಸಂಚಾರ ಮಾರ್ಗಸೂಚಿಯನ್ನು ಗೂಗಲ್ ಮ್ಯಾಪ್ನಲ್ಲಿ ನೋಡಬಹುದಾಗಿದ್ದು, ಇದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ 6, 7 ಮತ್ತು 8ರಂದು ನಡೆಸುವ ಕುರಿತು ನಿರ್ಧರಿಸಲಾಗಿದೆ., ಹಾವೇರಿ ಸಮ್ಮೇಳನವನ್ನು 2023ರ ಜನವರಿ 6, 7, 8ರ ಶುಕ್ರವಾರ, ಶನಿವಾರ ಮತ್ತು ರವಿವಾರದಂದು ನಡೆಸಲು ತೀರ್ಮಾನಿಸಲಾಗಿದೆ.. ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾನಾ ಕಾರಣಗಳಿಂದ ಅನೇಕ ಬಾರಿ ಮುಂದೂಡಲಾಗಿತ್ತು. ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಡೆಸಲು ನಿರ್ಧರಿಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಲಾಗುತ್ತದೆ, ಇದಕ್ಕಾಗಿ ಸರ್ಕಾರ ಬಜೆಟ್ ನಲ್ಲಿ 20 ಕೋಟಿ ಮೀಸಲಿಟ್ಟಿತ್ತು, ಅಂತೆಯೇ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
BIGG NEWS : ‘ಸಿದ್ದೇಶ್ವರ ಸ್ವಾಮೀಜಿ’ ಆರೋಗ್ಯ ವದಂತಿ ಕುರಿತು ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ |B.C Nagesh