ಮಂಡ್ಯ: ಹಾಸನದಲ್ಲಿ ಇಂದು ನಡೆದಿರುವಂತ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಅನೇಕರು ಗಾಯಗೊಂಡಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಾಸನದಲ್ಲಿ ನಡೆದಿರುವಂತ ಅಪಘಾತದಿಂದ ನೋವು ತಂದಿದೆ. ಮೃತರ ಕುಟುಂಬಸ್ಥರಿಗೆ ದುಖ ಭರಿಸುವಂತ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಶಾಂತಿಯನ್ನು ಸಿಗಲಿದೆ ಎಂದರು.
BIGG NEWS : ಕರ್ನಾಟಕಕ್ಕೆ 2,900 ಕೋಟಿ ದಂಡ ವಿಧಿಸಿದ ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ : ಕಾರಣ ಏನು ಗೊತ್ತಾ?
ಹಾಸನದ ಅಫಘಾತದ ( Hassan Accident ) ಸಂಬಂಧ ಈಗಾಗಲೇ ಅಲ್ಲಿನ ಎಸ್ಪಿಯೊಂದಿಗೆ ಮಾತನಾಡಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡೋದಕ್ಕೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು ಎಂಬುದಾಗಿ ಘೋಷಣೆ ಮಾಡಿದರು.
ನಿನ್ನೆ ಬಳ್ಳಾರಿಯಲ್ಲಿ ರಾಹುಲ್ ಗಾಂಧಿಯವರು ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರವೇ ತುಂಬಿದೆ ಎಂದಿದ್ದಾರೆ. ಆದ್ರೇ ಅವರ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಆದಷ್ಟು ಭ್ರಷ್ಟಾಚಾರ ಬೇರೆ ಯಾವುದೇ ಸರ್ಕಾರದಲ್ಲಿ ನಡೆದಿಲ್ಲ. ಕಾಂಗ್ರೆಸ್ ಕಾಲದಲ್ಲಿನ ಭ್ರಷ್ಟಾಚಾರದಗಳ ಬಗ್ಗೆ ರಾಹುಲ್ ಗಾಂಧಿಗೆ ದಾಖಲೆ ಸಹಿತ ಕಳುಹಿಸಿಕೊಡುತ್ತೇನೆ ಎಂದರು.
ಸಿದ್ಧರಾಮಯ್ಯ ಬಳ್ಳಾರಿಯಲ್ಲಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ಸಿದ್ಧರಾಮಯ್ಯ ಹೇಳಿದ್ದು ಯಾವುದೂ ನಿಜವಾಗಿಲ್ಲ. ನಾವು ನೂರಕ್ಕೆ ನೂರು ಬರುತ್ತೇವೆ ಅಂತ ಕಳೆದ ಬಾರಿ ಹೇಳಿದ್ದರು. ಆದ್ರೇ ಕಾಂಗ್ರೆಸ್ ಅಷ್ಟು ಸೀಟು ಗೆಲ್ಲಲಿಲ್ಲ. ಯಡಿಯೂರಪ್ಪ ನಮ್ಮಪ್ಪನಾಣೆ ಸಿಎಂ ಆಗೋದಿಲ್ಲ ಅಂದಿದ್ದರು. ಆದ್ರೇ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು ಎಂದು ಹೇಳಿದರು.