ಹಾಸನ : ಹಾಸನಾಂಬೆಯ ದರ್ಶನ ಸಿಗದ ಹಿನ್ನೆಲೆ ಬಿಜೆಪಿ ಶಾಸಕ ಸ್ವಪಕ್ಷದ ಶಾಸಕನ ವಿರುದ್ಧ ಗರಂ ಆಗಿ,ಏಕವಚನದಲ್ಲೇ ವಾಗ್ಧಾಳಿ ನಡೆಸಿದ ಘಟನೆ ಹಾಸನದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದ ನಾಗೇಂದ್ರ ಅವರು ಇಂದು ಮಧ್ಯಾಹ್ನ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಆದರೆ ಆ ವೇಳೆ ನೈವೇದ್ಯಕ್ಕಾಗಿ ಗರ್ಭಗುಡಿ ಹಾಗೂ ದೇವಾಲಯದ ಮುಖ್ಯದ್ವಾರ ಮುಚ್ಚಲಾಗಿತ್ತು.
ಶಾಸಕ ನಾಗೇಂದ್ರ ಹಾಗೂ ಕುಟುಂಬಸ್ಥರಿಗೆ ಒಂದು ಗಂಟೆಯಾದರೂ ದೇವಾಲಯದ ಒಳಗೆ ಹೋಗಲಾಗಲಿಲ್ಲ, . ಎಷ್ಟೇ ಸಮಯ ಕಾದರೂ ದರ್ಶನ ಸಿಗದೇ ಬೇಸರದಿಂದ ವಾಪಸ್ ತೆರಳುವ ವೇಳೆ ಬಿಜೆಪಿ ಕಾರ್ಯಕರ್ತರ ಎದುರೇ ಶಾಸಕ ಪ್ರೀತಂಗೌಡ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು.
ಶಾಸಕನಿಗೆ ಒಂದು ಫೋನ್ ತೆಗೆಯೋ ಸೌಜನ್ಯ ಇಲ್ಲ, ಒಬ್ಬ ಶಾಸಕ ಬಂದು ಇನ್ನೊಬ್ಬ ಶಾಸಕನಿಗೆ ಫೋನ್ ಮಾಡಿದ್ರೆ ಒಂದು ಫೋನ್ ತೆಗೆಯುವ ಸೌಜನ್ಯ ಇಲ್ಲ. ಈ ದೌಲತ್ತು ಹೆಚ್ಚು ದಿನ ನಡೆಯೋದಿಲ್ಲ ಬಿಡಿ. ನನಗೆ ಗೊತ್ತಿದೆ, ನಾಳೆ ಜಿಲ್ಲಾಡಳಿತದ ಕಡೆಯಿಂದ ಬರುತ್ತೇನೆ ಬಿಡಿ ಎಂದು ಸ್ಥಳೀಯ ಶಾಸಕ ಪ್ರೀತಂಗೌಡ ವಿರುದ್ಧ ಶಾಸಕ ನಾಗೇಂದ್ರ ಕಿಡಿಕಾರಿದರು.
ತೀವ್ರ ಕುತೂಹಲ ಮೂಡಿಸಿದ ಸಿ.ಎಂ ಇಬ್ರಾಹಿಂ- ‘ಕೆಜಿಎಫ್ ಬಾಬು’ ಭೇಟಿ: ಶೀಘ್ರವೇ JDS ಸೇರ್ಪಡೆ?
BREAKING NEWS : ಅಯೋಧ್ಯೆಯಲ್ಲಿ ಐತಿಹಾಸಿಕ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ |Ayodhya Deepotsav