ಹಾಸನ : ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಪ್ರಸಿದ್ಧ ಹಾಸನಾಂಬ ದೇವಿಯ ವಿಶೇಷ ದರ್ಶನದಿಂದ ಕೇವಲ ಮೂರು ದಿನಗಳಲ್ಲಿ 42.78 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಕಾಣಿಕೆ ಹುಂಡಿಗೆ ಭಕ್ತರು ಇನ್ನು ಕಾಣಿಕೆಯನ್ನು ಅರ್ಪಿಸುತ್ತಲೇ ಇದ್ದಾರೆ.
BIGG NEWS : ಹಾಸನಾಂಬೆ ದೇವಿ ದರ್ಶನಕ್ಕೆ ಪತ್ನಿಯನ್ನು ಎತ್ತಿಕೊಂಡು ಬಂದ ಪತಿ | Hasanambe Temple
ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಹಾಸನಂಬೆಯ ಗರ್ಭದ ಗುಡಿ ಬಾಗಿಲು ಅಕ್ಟೋಬರ್ 13ರಂದು ತೆರೆದಿತ್ತು. ಆದರೆ ಭಕ್ತರಿಗೆ ದೇವಿ ದರ್ಶನ ಮಡಲು ಅಕ್ಟೋಬರ್ 14ರಿಂದ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎನ್ನುವವರಿಗಗಿ ತಲಾ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
BIGG NEWS : ಹಾಸನಾಂಬೆ ದೇವಿ ದರ್ಶನಕ್ಕೆ ಪತ್ನಿಯನ್ನು ಎತ್ತಿಕೊಂಡು ಬಂದ ಪತಿ | Hasanambe Temple
ಕಳೆದ ಮೂರು ದಿನದಲ್ಲಿ ಅಂದರೆ ಅಕ್ಟೋಬರ್ 14ರಂದು 4.99 ಲಕ್ಷ ರೂಪಾಯಿ, ಅಕ್ಟೋಬರ್ 15ರಂದು 3.31 ಲಕ್ಷ ರೂಪಾಯಿ, ಅಕ್ಟೋಬರ್ 16ರಂದು 8.35 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ ತಲಾ 300 ರೂಪಾಯಿ ವಿಶೇಷ ದರ್ಶನದಿಂದ ಅಕ್ಟೋಬರ್ 14 ರಂದು 4.30 ಲಕ್ಷ ರೂಪಾಯಿ, ಅಕ್ಟೋಬರ್ 15 ರಂದು 4.49 ಲಕ್ಷ ರೂಪಾಯಿ, ಅಕ್ಟೋಬರ್ 16 ರಂದು 1.20 ಲಕ್ಷ ರೂಪಾಯಿ ಸಂಗ್ರಹವಾಗಿದೆ.
BIGG NEWS : ಹಾಸನಾಂಬೆ ದೇವಿ ದರ್ಶನಕ್ಕೆ ಪತ್ನಿಯನ್ನು ಎತ್ತಿಕೊಂಡು ಬಂದ ಪತಿ | Hasanambe Temple