ಬೆಂಗಳೂರು: ಮುಂಬರುವ ಚುನಾವಣೆಗೆ ಮತ ಗಳಿಸುವ ಸಲುವಾಗಿ ಕಾಂಗ್ರೆಸ್ ಪ್ಲಾನ್ ನಡೆಸುತ್ತಿದೆ. ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆಸಿದ್ದಾರೆ. ಬಿಜೆಪಿ ಯಡಿಯೂರಪ್ಪ ಅವರನ್ನು ಹೇಗೆ ಬಳಸಿಕೊಂಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಲಿಂಗಾಯತ ಸಮುದಾಯದ ಶೇ.50 ರಷ್ಟು ಮತಗಳು ಕಾಂಗ್ರೆಸ್ಗೆ ಬರಲಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ತಿಳಿಸಿದ್ದಾರೆ.
BIGG NEWS: ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 6.1ತೀವ್ರತೆ ದಾಖಲು
ನಗರದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೋಗಿದ್ದ ಮತಗಳಲ್ಲಿ ಅರ್ಧದಷ್ಟು ನಮಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರದಿಂದ ಯುಡಿಯೂರಪ್ಪ ಅವರನ್ನ ಕೆಳಗೆ ಇಳಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪರದ್ದು ಮುಕ್ತಾಯಗೊಂಡಿದೆ. ಎರಡು ಬಾರಿ ಅವರಿಗೆ ಪೂರ್ಣ ಅಧಿಕಾರ ಕೊಡಲಿಲ್ಲ. ಅವರಿಂದಲೇ ಆಪರೇಷನ್ ಕಮಲ ಮಾಡಿಸಿ ನಡೆಸಿಕೊಂಡಿರೋದು ಗೊತ್ತಿದೆ ಎಂದರು.