ಚಿಕ್ಕಮಗಳೂರು : ವಿವಾದಿತ ದತ್ತಪೀಠದ ( Datta Peeta ) ಹಿಂದೂ ಅರ್ಚಕರಿಗೆ ಮತ್ತು ಸಮಿತಿಯ ಸದಸ್ಯರೊಬ್ಬರಿಗೆ ಜಿಲ್ಲಾಡಳಿತ ಗನ್ ಮ್ಯಾನ್ ( Gun Man) ಭದ್ರತೆ ನೀಡಿದೆ.
ಇಬ್ಬರು ಹಿಂದೂ ಅರ್ಚಕರ ನೇಮಕ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶಕ್ಕೆ ಕೆಲವು ಮುಸ್ಲಿಂರು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ದತ್ತ ಜಯಂತಿ ವಿಚಾರದಲ್ಲಿ ಕೋರ್ಟ್ ಹೇಳಿದ್ದೊಂದು ದತ್ತಪೀಠ ವ್ಯವಸ್ಥಾಪನಾ ಸಮಿತಿ ಮಾಡಿರುವುದು ಒಂದು ಎಂದು ಮುಸ್ಲಿಂ ಸಮುದಾಯದ ಕೆಲವರು ಆಕ್ರೋಶ ವ್ಯಕ್ತಪಡಿಸಿತ್ತು.
ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಅರ್ಚಕರಾದ ಡಾ ಸಂದೀಪ್ ಶರ್ಮಾ ಹಾಗೂ ಶೃಂಗೇರಿ ಕೆ ಶ್ರೀಧರ್ ಅವರನ್ನು ನೇಮಿಸಲಾಗಿತ್ತು, ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಇಬ್ಬರು ಹಿಂದೂ ಅರ್ಚಕರಿಗೆ ಮತ್ತು ಆಡಳಿತ ಮಂಡಳಿ ಮುಸ್ಲಿಂ ಸದಸ್ಯ ಬಾಷಾಗೆ ಜಿಲ್ಲಾಡಳಿತ ಗನ್ ಮ್ಯಾನ್ ನೀಡಿದೆ.
ಅರ್ಚಕರ ನೇಮಕ ಸಂಬಂಧ ರಾಜ್ಯಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿತ್ತು. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇದ್ದರು. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿತ್ತು, ಅಂತೆಯೇ ಆಡಳಿತ ಮಂಡಳಿ ಇಬ್ಬರು ಅರ್ಚಕರನ್ನು ನೇಮಿಸಿ ಆದೇಶ ಹೊರಡಿಸಿತ್ತು.
BREAKING NEWS : ಅಫ್ಘಾನ್ -ಪಾಕ್ ಗಡಿಯಲ್ಲಿ ಭೀಕರ ಸ್ಫೋಟ : ನಾಲ್ವರು ಸಾವು, 20 ಮಂದಿಗೆ ಗಾಯ | Afghan-Pak border
‘ಎಜುಕೇಷನ್ ಟುಡೇ- ಎಫೆಕ್ಟಿವಿ ಪ್ರಿನ್ಸಿಪಾಲ್ಸ್ ಪ್ರಶಸ್ತಿ’ಗೆ ‘ಖ್ಯಾತ ಶಿಕ್ಷಣ ತಜ್ಱ ಕೆ. ಉದಯ ರತ್ನಕುಮಾರ್’ ಭಾಜನ