ಬೆಂಗಳೂರು : ಗುಜರಾತ್ ವಿಧಾನಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಗುಜರಾತ್ ನಲ್ಲಿ 154 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಗುಜರಾತ್ ನಲ್ಲಿ 7 ನೇ ಬಾರಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ನಲ್ಲಿ ಈ ಬಾರಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಒಂದು ರಾಜ್ಯವನ್ನು ಸುಶಾಸನವನ್ನು ಆಡಳಿತ ಮಾಡಿದ್ರೆ ಜನ ಬೆಂಬಲ ನೀಡುತ್ತಾರೆ. ಗುಜರಾತ್ ನಲ್ಲಿ 7 ನೇ ಬಾರಿ ಗೆಲ್ಲುತ್ತಿದ್ದೇವೆ. ಸರ್ಕಾರ ಉತ್ತಮ ಕೆಲಸ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಡಿಪಾಯ ಹಾಕಿ ಬೆಳೆಸಿದವರು ಪ್ರಧಾನಿ ಮೋದಿ. ಹಿಮಾಚಲ ಪ್ರದೇಶದಲ್ಲಿ ಸಮಬಲದ ಹೋರಾಟ ನಡೆಯುತ್ತಿದ್ದು, ಅಂತಿಮವಾಗಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ನಲ್ಲಿ ಘೋರ ದುರಂತ: ಸರ್ಕಾರಿ ಶಾಲೆಯಲ್ಲಿ ಬಿಸಿ ಗಂಜಿಯಿಟ್ಟಿದ್ದ ಟಬ್ಗೆ ಬಿದ್ದು ಅಕ್ಕ-ತಂಗಿ ಸಾವು