ಡೆಹ್ರಾಡೂನ್: ಖ್ಯಾತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಗುರುವಾರ ಬದರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದರು.
ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಕಂದಮ್ಮ ಬಲಿ |Dengue Disease
ಈ ವೇಳೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಗೆ 5 ಕೋಟಿ ದೇಣಿಗೆ ನೀಡಿದ್ದಾರೆ.ದೇವಾಲಯಕ್ಕೆ ಭೇಟಿ ನೀಡಿದ ಅಂಬಾನಿ ಅವರ ಜೊತೆಗೆ ಪುತ್ರ ಅನಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಅವರು ಆಗಮಿಸಿದ್ದರು. ಅಂಬಾನಿ ಅವರನ್ನು ದೇವಾಲಯದ ಅಧಿಕಾರಿಗಳು ಬರಮಾಡಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
#WATCH | Reliance Industries Chairman Mukesh Ambani visited Badrinath Dham and Kedarnath Dham today. He performed puja at both temples. The industrialist donated Rs 5 crores to The Badri-Kedar Temple Committee (BKTC) pic.twitter.com/DTrX4eCPvv
— ANI UP/Uttarakhand (@ANINewsUP) October 13, 2022
ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಅಂಬಾನಿ ಅವರು ಭೇಟಿ ನೀಡಿದ್ದಾರೆ. ಕಳೆದ ತಿಂಗಳು ಮೂರು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಮತ್ತು ದೇವಾಲಯದ ಟ್ರಸ್ಟ್ಗಳಿಗೆ ಇಷ್ಟೇ ಮೊತ್ತವನ್ನು ದೇಣಿಗೆ ನೀಡಿದರು
ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಕಂದಮ್ಮ ಬಲಿ |Dengue Disease