ಚಿಕ್ಕಮಗಳೂರು : ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆಯಾಗಿದ್ದು, ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸುರಪುರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಕುಣಗಳ್ಳಿ ನಿವಾಸಿ ರಾಮಕೃಷ್ಣ ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಸುರಪುರ ಗ್ರಾಮದ ಮಲ್ಲಿಕಾರ್ಜುನನಿಂದ ಕೊಲೆ ಆಗಿದೆ. ರಾಮಕೃಷ್ಣ ಕೊಲೆ ಮಾಡಿದ ಬಳಿಕ ಮಲ್ಲಿಕಾರ್ಜುನ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ರಾಮಕೃಷ್ಣ ಪದೇ ಪದೇ ತನ್ನ ವಿರುದ್ಧ ದೂರು ನೀಡುತ್ತಿದ್ದ ಹಾಗಾಗಿ ಕೊಲೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ.








