ಬೆಂಗಳೂರು: ಕಬಡ್ಡಿ, ಕೊಕ್ಕೋ, ಕುಸ್ತಿ, ಎತ್ತಿನಗಾಡಿ ಓಟ ಮತ್ತಿತರ ಐದು ಗ್ರಾಮೀಣ ಕ್ರೀಡೆಗಳಿಗೆ ( Rural Sports ) ಸರಕಾರ ಪ್ರೋತ್ಸಾಹ ನೀಡಲಿದೆ. ಕ್ರೀಡೆಯಿಂದ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ವ್ಯಕ್ತಿತ್ವ ವಿಕಸನಕ್ಕೂ ಇದು ಪೂರಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು “ಸೇನಾಪತಿ ಚಂದ್ರಶೇಖರ್ ಅಜಾದ್ ಆಟದ ಮೈದಾನ, ಬಾವೂರಾವ್ ದೇಶಪಾಂಡೆ ಭವನದ ಹತ್ತಿರ ಮಲ್ಲೇಶ್ವರ”ದಲ್ಲಿ ಕಬಡ್ಡಿ ಪಂದ್ಯಾವಳಿ “ನಮೋ ಕಿಸಾನ್ ಕಪ್-2022” ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಕಾರಣಕರ್ತ ಮತ್ತು ಸದಾ ಸ್ಪೂರ್ತಿಯಾಗಿರುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರೈತ ಮೋರ್ಚಾವು ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಕೊಡುತ್ತಿರುವುದು ಶ್ಲಾಘನಾರ್ಹ ಎಂದು ಅವರು ತಿಳಿಸಿದರು.
BIGG NEWS: ಮನಾಲಿಯಲ್ಲಿ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದ ʼಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ʼ| Watch
ನರೇಂದ್ರ ಮೋದಿಜಿ ಅವರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಸದಾ ಮಾದರಿ ಮತ್ತು ಜನಪರವಾಗಿರುತ್ತವೆ ಎಂದು ವಿವರಿಸಿದರು. ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟ ಸಂಘಟಕರನ್ನು ಅವರು ಅಭಿನಂದಿಸಿದರು.