ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈತರಿಗೆ ಆರ್ಥಿಕ ನೆರವು ನೀಡಲು ಛತ್ತೀಸ್ಗಢ ಸರ್ಕಾರ ರೈತರಿಂದ ಹಸುವಿನ ಸಗಣಿ ಖರೀದಿಸುತ್ತಿದೆ ಅನ್ನೋದು ನಿಮಗೆ ಗೊತ್ತಿದೆ. ಸಧ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರ, ಹಸುವಿನ ಸಗಣಿ ಮಾತ್ರವಲ್ಲ ಮೂತ್ರವನ್ನ ಖರೀದಿಸಲು ನಿರ್ಧರಿಸಿದೆ.
ಹೌದು, ಛತ್ತೀಸ್ಗಢ ಸರ್ಕಾರವು ಈಗಾಗಲೇ ಗೋಧನ್ ನ್ಯಾಯ್ ಯೋಜನೆ ಅಡಿಯಲ್ಲಿ ರೈತರಿಂದ ಹಸುವಿನ ಸಗಣಿ ಸಂಗ್ರಹಿಸುತ್ತಿದೆ. ಪ್ರತಿ ಕೆ.ಜಿ ಸಗಣಿಗೆ 1.50 ರಿಂದ 2 ರೂಪಾಯಿ ನೀಡುತ್ತಿದೆ. ಈ ಕ್ರಮದಲ್ಲಿ ಗೋವಿನ ಸಗಣಿ ಜತೆಗೆ ಗೋಮೂತ್ರವನ್ನೂ ಖರೀದಿಸಲಾಗುವುದು. ಈ ಯೋಜನೆ ಶೀಘ್ರದಲ್ಲೇ ರಾಜ್ಯಾದ್ಯಂತ ಆರಂಭವಾಗಲಿದೆ. ಒಂದು ಲೀಟರ್ ಗೋಮೂತ್ರವನ್ನ 4 ರೂಪಾಯಿ ದರದಲ್ಲಿ ನೀಡಲಾಗುವುದು.
ಛತ್ತೀಸ್ಗಢದ ಭೂಪೇಶ್ ಬಘೇಲ್ ಸರ್ಕಾರವು ರೈತರಿಗೆ ಸಹಾಯ ಮಾಡಲು ಗೋಧನ್ ನ್ಯಾಯ್ ಯೋಜನೆ ಯೋಜನೆಯನ್ನ ಪ್ರಾರಂಭಿಸಿದೆ. ಇದರ ಭಾಗವಾಗಿ ಗೋವಿನ ಸಗಣಿ ಖರೀದಿಸಲಾಗುತ್ತಿದೆ. ಇದರ ಜತೆಗೆ ಇನ್ನು ಮುಂದೆ ಗೋಮೂತ್ರವನ್ನೂ ಖರೀದಿಸುವುದಾಗಿ ಹೇಳಿ ರೈತರಿಂದ ಲೀಟರ್ʼಗೆ 4 ರೂ.ನಂತೆ ಗೋಮೂತ್ರ ಖರೀದಿಸಲು ಸರಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಶೀಘ್ರದಲ್ಲೇ ಸಿಎಂ ಭೂಪೇಶ್ ಬಘೇಲ್ ಅವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು. ಸಿಎಂ ಒಪ್ಪಿಗೆ ನೀಡಿದ ಬಳಿಕ ಈ ಯೋಜನೆ ರಾಜ್ಯದಲ್ಲಿ ಜಾರಿಯಾಗಲಿದೆ.
ಈ ವಿವರಗಳನ್ನ ಬಹಿರಂಗಪಡಿಸಿದ ಅಧಿಕಾರಿಗಳು, ರಾಜ್ಯ ಸರ್ಕಾರವು ರೈತರಿಂದ ಲೀಟರ್ಗೆ 4 ರೂ.ನಂತೆ ಗೋಮೂತ್ರವನ್ನ ಖರೀದಿಸುತ್ತದೆ ಎಂದು ಹೇಳಿದರು. ಈ ಪ್ರಾಯೋಗಿಕ ಯೋಜನೆಯು ಎರಡು ವಾರಗಳಲ್ಲಿ ಪ್ರಾರಂಭವಾಗಲಿದೆ ಎಂದರು. ರಾಜ್ಯ ಸರ್ಕಾರವು ಫೆಬ್ರವರಿ 2022ರಲ್ಲಿ ಗೋವಿನ ಸಗಣಿ ಖರೀದಿಸಲು ಪ್ರಾರಂಭಿಸಿದೆ ಎಂದು ಅವ್ರು ಹೇಳಿದ್ದು, ಸಧ್ಯ ತಾಜಾ ಗೋಮೂತ್ರವನ್ನು ಖರೀದಿಸಲು ನಿರ್ಧರಿಸಿದೆ. ಇದರ ನಂತರ ಇಡೀ ಯೋಜನೆಯ ಸಂಗ್ರಹಣೆ ಮತ್ತು ಸಂಶೋಧನೆಯ ವಿಧಾನವನ್ನ ನಿರ್ಧರಿಸಲು ಸಮಿತಿಯನ್ನ ರಚಿಸಲಾಯಿತು ಎಂದು ತಿಳಿಸಿದರು.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಲಹೆಗಾರ ಪ್ರದೀಪ್ ಶರ್ಮಾ ಮಾತನಾಡಿ, ಗೋಮೂತ್ರವನ್ನು ಪ್ರತಿ ಲೀಟರ್ಗೆ 4 ರೂ.ನಂತೆ ಖರೀದಿಸಲು ಸಮಿತಿ ನಿರ್ಧರಿಸಿದೆ ಎಂದು ಹೇಳಿದರು. ಶೀಘ್ರದಲ್ಲೇ ಸಿಎಂ ಅವರಿಂದ ಅನುಮೋದನೆ ಪಡೆಯುವುದಾಗಿ ಅವ್ರು ಹೇಳಿದ್ದು, ಗೋಮೂತ್ರವನ್ನ ‘ಗ್ರಾಮ ಗೌತನ್ ಸಮಿತಿ’ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು 15 ದಿನಗಳಿಗೊಮ್ಮೆ ಜಾನುವಾರು ಸಾಕಣೆದಾರರಿಗೆ ಹಣ ಪಾವತಿಸಲಾಗುತ್ತದೆ ಎಂದರು.