ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ( Karnataka State Minorities Commission ) ಅಧ್ಯಕ್ಷರಾಗಿದ್ದಂತ ಅಬ್ದುಲ್ ಅಜೀಮ್ ( Abdul Azeem ) ಅವರ ಅಧಿಕಾರಾವಧಿ ನಿನ್ನೆ ಕೊನೆಗೊಂಡಿತ್ತು. ಅವರನ್ನು ಮತ್ತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕರನ್ನಾಗಿ ಮರುನೇಮಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ದಿನಾಂಕ 15-10-2019ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅಬ್ದುಲ್ ಅಜೀಮ್ ಅವರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನಾಮನಿರ್ದೇಶಿಸಿದ್ದು, ಇವರ ಕಾರ್ಯಾವಧಿ ದಿನಾಂಕ 14-10-2022ರಂದು ಮುಕ್ತಾಯವಾಗಿದೆ ಎಂದಿದ್ದಾರೆ.
ಪೆದ್ದ ಸಚಿವ ಶ್ರೀರಾಮುಲು ಜೊತೆ ಚರ್ಚೆಗೆ ನಾನೇಕೆ, ಉಗ್ರಪ್ಪ ಸಾಕು – ಸಿದ್ದರಾಮಯ್ಯ
ಈ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ಅಬ್ದುಲ್ ಅಜೀಮ್ ಮರು ನಾಮನಿರ್ದೇಶಿಸಿ ಅಧಿಸೂಚಿಸಲಾಗಿದೆ ಎಂದಿದ್ದಾರೆ.