ಬೆಂಗಳೂರು: ಮೋದಿ ಸರ್ಕಾರ ಜಾರಿಗೆ ತಂದಂತ ಡಿಜಿಟಲ್ ಇಂಡಿಯಾದಿಂದಾಗಿ( Digital India ), 40% ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದ ‘ಸರ್ಕಾರಿ ಹುದ್ದೆ ಮಾರಾಟ ಯೋಜನೆ’ ಎಗ್ಗಿಲ್ಲದೆ ಸಾಗುತ್ತಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿ ( BJP Karnataka ) ವಿರುದ್ಧ ಕಿಡಿ ಕಾರಿದೆ.
BIG NEWS: ಸಿಎಂ ಬದಲಾವಣೆ ಮಾತೇ ಇಲ್ಲ: ಕಾಂಗ್ರೆಸ್ ಗೆ ಬೊಮ್ಮಾಯಿ ಖಡಕ್ ತಿರುಗೇಟು
ಈ ಕುರಿತಂತೆ ಟ್ವಿಟ್ ( Twitter ) ಮಾಡಿದ್ದು, ಮೋದಿಜಿಯವರ ( Modi ) ‘ಡಿಜಿಟಲ್ ಇಂಡಿಯಾ’ ಘೋಷಣೆಗೆ ಬಿಜೆಪಿ ಸರ್ಕಾರ ಸಮರ್ಥವಾಗಿ ಅರ್ಥ ಕೊಡುತ್ತಿದೆ. ಅಕ್ರಮ ನಡೆಸುವುದರಲ್ಲಿ ಮಾತ್ರ! ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲೂ ಬ್ಲೂಟೂತ್, ಫೋನ್, ಸ್ಮಾರ್ಟ್ ವಾಚ್ಗಳೇ ಕೆಲಸ ಮಾಡುತ್ತಿವೆ. 40% ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದ ‘ಸರ್ಕಾರಿ ಹುದ್ದೆ ಮಾರಾಟ ಯೋಜನೆ’ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಹೇಳಿದೆ.
ಮೋದಿಜಿಯವರ 'ಡಿಜಿಟಲ್ ಇಂಡಿಯಾ' ಘೋಷಣೆಗೆ @BJP4Karnataka ಸರ್ಕಾರ ಸಮರ್ಥವಾಗಿ ಅರ್ಥ ಕೊಡುತ್ತಿದೆ.
ಅಕ್ರಮ ನಡೆಸುವುದರಲ್ಲಿ ಮಾತ್ರ!
ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲೂ
ಬ್ಲೂಟೂತ್, ಫೋನ್, ಸ್ಮಾರ್ಟ್ ವಾಚ್ಗಳೇ ಕೆಲಸ ಮಾಡುತ್ತಿವೆ.40% ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದ 'ಸರ್ಕಾರಿ ಹುದ್ದೆ ಮಾರಾಟ ಯೋಜನೆ' ಎಗ್ಗಿಲ್ಲದೆ ಸಾಗುತ್ತಿದೆ.
— Karnataka Congress (@INCKarnataka) August 11, 2022
‘ಬಿಜೆಪಿ ಗೊಂದಲಗಳಿಗೆ ಕಾಂಗ್ರೆಸ್ ಹೊಣೆಯೇ? ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರೆ, ಯಾರು ಹೇಳಿದವರು ಎಂದು ನಳೀನ್ ಕುಮಾರ್ ಕಟೀಲ್ ಕೇಳುತ್ತಾರೆ ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ! ಎಂದು ವ್ಯಂಗ್ಯವಾಡಿದೆ.
'@BJP4Karnataka ಗೊಂದಲಗಳಿಗೆ ಕಾಂಗ್ರೆಸ್ ಹೊಣೆಯೇ?
ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ.
ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು @BSYBJP ಹೇಳಿದರೆ, ಯಾರು ಹೇಳಿದವರು ಎಂದು @nalinkateel ಕೇಳುತ್ತಾರೆ
ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ! pic.twitter.com/pztGET2Slo
— Karnataka Congress (@INCKarnataka) August 11, 2022