ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸಾರಿಗೆ ಇಲಾಖೆಯ ( Transport Department ) ಸಮಗ್ರ ಆರ್ಥಿಕ ಸ್ವಾಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅವರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಅವಧಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಈ ನಡವಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ Restructuring, Asset Monetization, ಆರ್ಥಿಕ ಸ್ವಾಲಂಬನೆ ಮತ್ತು ಸಂಪನ್ಮೂಲ ಕ್ರೂಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ದಿನಾಂಕ 30-11-2021ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು ಎಂದಿದ್ದಾರೆ.
ದಿನಾಂಕ 30-11-2021ರಲ್ಲಿ ರಚಿಸಿದ್ದಂತ ಎಂ ಆರ್ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿನ ಒನ್ ಮ್ಯಾನ್ ಕಮಿಟಿಯ ಅವಧಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿ ಆದೇಶಿಸಿರೋದಾಗಿ ಹೇಳಿದ್ದಾರೆ.
BIGG NEWS : ಜ.12ರಂದು ಉಡುಪಿಗೆ ʼಯುಪಿ ಸಿಎಂ ಯೋಗಿ ಆದಿತ್ಯನಾಥ್ʼ : ರಾಜ್ಯಮಟ್ಟದ ‘ಯುವ ಸಂಗಮʼ ಸಮಾವೇಶದಲ್ಲಿ ಭಾಗಿ
ಅಂದಹಾಗೇ ಈ ಸಮಿತಿಯನ್ನು ಮೂರು ತಿಂಗಳ ಅವಧಿಗೆ ಮಾತ್ರವೇ ರಚಿಸಲಾಗಿತ್ತು. ದಿನಾಂಕ 28-02-2022ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಸಮಿತಿಯ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ ಈ ಸಮಿತಿಯನ್ನು ಮತ್ತೆ ಮಾರ್ಚ್ 2023ರವರೆಗೆ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸಂಪನ್ಮೂಲ ಸೇರಿದಂತೆ ವಿವಿಧ ವಿಷಯಗಳ ಮೇಲೆ ಅಧ್ಯಯನ ನಡೆಸಿ, ವರದಿ ನೀಡಲು ಕಾಲಾವಧಿ ವಿಸ್ತರಿಸಲಾಗಿದೆ.