ಬೆಂಗಳೂರು: ನೆಹರೂ ಭಾರತ ದೇಶ ವಿಭಜನೆಗೆ ಕಾರಣಕರ್ತರು. ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಿಸಲಾಗುತ್ತಿದೆ. ದೇಶ ವಿಭಜನೆಗೆ ಕಾರಣಕರ್ತರಾದ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಬಿಟ್ಟಿದ್ದೇವೆ ಎಂಬುದಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ( BJP MLC N Ravikumar ) ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವಂತ ಅವರು, ಈ ಬಾರಿಯ ಸ್ವಾತಂತ್ರ್ಯದ 75ನೇ ವರ್ಷದ ರಾಷ್ಟ್ರೀಯ ಹಬ್ಬವನ್ನು ಬಿಜೆಪಿ ವತಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸಡಗರ, ಉಲ್ಲಾಸ ಮತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ 75 ಲಕ್ಷಕ್ಕಿಂತ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮನೆಮನೆಗಳಿಗೆ ವಿತರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಇಂದು ತಿಳಿಸಿದರು.

BIG NEWS: ನಾಳೆ ಬೆಂಗಳೂರಿನ ಚಾಮರಾಜಪೇಟೆಯ ‘ಈದ್ಗಾ ಮೈದಾನ’ದಲ್ಲಿ ‘ಧ್ವಜಾರೋಹಣ’: ಖಾಕಿ ಸರ್ಪಗಾವಲು

ಕಂಠೀರವ ಸ್ಟೇಡಿಯಂನಲ್ಲಿ ನಡೆಸಿರುವ ಸಿದ್ಧತೆಯನ್ನು ಗಮನಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೂತ್ ಮಟ್ಟದಿಂದ ನಗರ ಮಟ್ಟದ ವರೆಗೆ ಹಾಗೂ ರಾಜ್ಯದ ರಾಜಧಾನಿ ಮಟ್ಟದ ವರೆಗೆ ಈ ಆಚರಣೆ ನಡೆಯುತ್ತಿದೆ. ಅದರ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಸ್ಟೇಡಿಯಂನಲ್ಲಿ ನಾಳೆ ನಡೆಯುವ ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲಾಗುವುದು. ಅವರ ವೀರಗಾಥೆ, ಶೌರ್ಯಕಥನವನ್ನು ಜನರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಅದೇ ಸಂದರ್ಭದಲ್ಲಿ ಈ ದೇಶ ವಿಭಜನೆಯೂ ಆಗಿದೆ. ದೇಶ ವಿಭಜನೆಯ ಬಳಿಕ ಭಾರತ- ಪಾಕಿಸ್ತಾನಗಳು ನೆಮ್ಮದಿಯಿಂದಿಲ್ಲ. ನೆಹರೂ ಮಾಡಿದ ಮಹಾನ್ ದ್ರೋಹದ ಪರಿಣಾಮವಾಗಿ ಇವತ್ತು ಎರಡೂ ದೇಶಗಳು ಮಹಾನ್ ದುಃಖತಪ್ತ ದೇಶಗಳಾಗಿವೆ. ಅದರ ಸ್ಮರಣೆಯನ್ನೂ ಮಾಡಲಿದ್ದೇವೆ ಎಂದು ವಿವರಿಸಿದರು.

Shocking News: ಮಡಕೆಯಿಂದ ನೀರು ಕುಡಿದಿದ್ದಕ್ಕೆ ದಲಿತ ಬಾಲಕನನ್ನು ಕೊಂದ ಶಿಕ್ಷಕ

ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯನ್ವಯ ಇವತ್ತು ಸಂಜೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ದೇಶ ವಿಭಜನೆಯ ಕರಾಳ ಇತಿಹಾಸವನ್ನು ಉದ್ಘಾಟಿಸಲಿದ್ದಾರೆ ಎಂದರು. ನಾಳೆ ಬೆಂಗಳೂರಿನ ಎಲ್ಲ ವಾರ್ಡ್‍ಗಳಿಂದ ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನರು ಘೋಷಣೆ ಕೂಗುತ್ತ ತಮ್ಮ ವಾಹನಗಳಲ್ಲಿ ಬರಲಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳನ್ನು ಹಿಡಿದು ಇಲ್ಲಿಗೆ ಬರಲಿದ್ದಾರೆ. ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡ, ರಾಜ್ಯದ ಸಚಿವರು ಭಾಗವಹಿಸಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷದ ಶೇ 5ರಷ್ಟು ರ್ಯಾಲಿಗಳನ್ನೂ ಮಾಡುತ್ತಿಲ್ಲ. ಬೆಂಗಳೂರಿನ ಈ ಕಾರ್ಯಕ್ರಮವನ್ನು ಮುಂಚಿತವಾಗಿಯೇ ಯೋಜಿಸಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಚಾಮರಾಜಪೇಟೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಕಾರಣ ಯಾರೆಂದು ತಮಗೆಲ್ಲರಿಗೂ ಗೊತ್ತಿದೆ. ರಾಷ್ಟ್ರಧ್ವಜಾರೋಹಣಕ್ಕೆ ಬಿಗಿ ಬಂದೋಬಸ್ತ್ ಯಾಕೆ ಏರ್ಪಡಿಸಲಾಗಿದೆ ಎಂದು ನಿಮಗೂ ತಿಳಿದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು ಎಂದರು.

ಭಾರತದಲ್ಲಿ VLC ಮೀಡಿಯಾ ಏಕೆ ನಿಷೇಧಿಸಲಾಗಿದೆ.? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | VLC Player Is Banned In India

ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂಬ ಮಹಾತ್ಮ ಗಾಂಧಿಯವರ ಸೂಚನೆಯನ್ನು ನೆಹರೂ ಅವರು ಪಾಲಿಸಲಿಲ್ಲ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ನೆಹರೂ ಭಾರತ ದೇಶ ವಿಭಜನೆಗೆ ಕಾರಣಕರ್ತರು ಎಂದು ಆರೋಪಿಸಿದರು. ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಿಸಲಾಗುತ್ತಿದೆ. ದೇಶ ವಿಭಜನೆಗೆ ಕಾರಣಕರ್ತರಾದ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಬಿಟ್ಟಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೇ ಅಲ್ಲ. ಸ್ವಾತಂತ್ರ್ಯ ಹೋರಾಟ ಮಾಡಿದ ಮೈಸೂರಿನ ರಾಜರನ್ನು ಜೈಲಿಗೆ ಕಳುಹಿಸಿದ ವ್ಯಕ್ತಿ ಟಿಪ್ಪು ಸುಲ್ತಾನ್. ಅನೇಕ ದೇವಾಲಯಗಳನ್ನು ಧ್ವಂಸ ಮಾಡಿದ, ಕೊಡಗು, ಚಿತ್ರದುರ್ಗ, ಮಂಗಳೂರು ಸೇರಿ ವಿವಿಧೆಡೆ ಮತಾಂತರ ಮಾಡಿದ ಹಾಗೂ ಮಹಿಳೆಯರ ಕಗ್ಗೊಲೆ ಮಾಡಿದ, ಧರ್ಮದ್ರೋಹ ಮಾಡಿದ ವ್ಯಕ್ತಿ ಟಿಪ್ಪು ಸುಲ್ತಾನ್ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಸ್ವಾತಂತ್ರ್ಯದ ಜಾಹೀರಾತು ವಿವಾದ: ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರ

ಕಾಂಗ್ರೆಸ್ಸಿಗರು ಸರದಾರ್ ಪಟೇಲರಿಗೆ ಅವಮಾನ ಮಾಡಿದ್ದರು. ಅವರ ಭಾವಚಿತ್ರವನ್ನು ಹೆಮ್ಮೆಯಿಂದ ಹಾಕುತ್ತೇವೆ. ಇಡೀ ಪ್ರಪಂಚದಲ್ಲಿ ದೊಡ್ಡ ವಿಗ್ರಹ ನಿರ್ಮಿಸಿದವರು ನಾವು. ನಾವು ಉದ್ದೇಶಪೂರ್ವಕವಾಗಿ ನೆಹರೂ ಭಾವಚಿತ್ರ ಹಾಕುತ್ತಿಲ್ಲ ಎಂದರು.

ಸಿದ್ದರಾಮಯ್ಯ ಸಮಾಜವಾದಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಅಪ್ಪಿಕೊಳ್ಳುವ, ಕುಳಿತುಕೊಳ್ಳುವ ದೌರ್ಭಾಗ್ಯದ ಪರಿಸ್ಥಿತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಬಂದಿದೆ ಎಂದು ಟೀಕಿಸಿದರು.

Share.
Exit mobile version