ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹಾಗೂ ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾಗಿರುವಂತ ಆಡಿಯೋ ರಿಲೀಸ್ ಆಗಿದೆ.

ಹಾಸನ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರು ಜೈಲು ಪಾಲಾಗಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸ್ ವಶದಲ್ಲಿದ್ದಂತ ವೇಳೆಯಲ್ಲೇ ಡಿಕೆಶಿ 100 ಕೋಟಿ ಆಫರ್ ನೀಡಿದ್ದರ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದರು. ಅಲ್ಲದೇ ಶೀಘ್ರವೇ ಮತ್ತೊಂದು ಆಡಿಯೋ ರಿಲೀಸ್ ಮಾಡೋದಾಗಿಯೂ ಹೇಳಿದ್ದರು. ಅದರಂತೆ ಈಗ ದೇವರಾಜೇಗೌಡ ಹಾಗೂ ಶಿವರಾಮೇಗೌಡ ಅವರು ಮಾತನಾಡಿದ್ದಾರೆ ಎನ್ನಲಾದಂತ ಆಡಿಯೋ ರಿಲೀಸ್ ಆಗಿದೆ.

ರಿಲೀಸ್ ಆಗಿರುವಂತ ಆಡಿಯೋದಲ್ಲಿ ಶಿವರಾಮೇಗೌಡ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಿದೆ ಎಂಬುದಾಗಿ ತಿಳಿದು ಬಂದಿದೆ.

ಆಡಿಯೋದಲ್ಲೇನಿದೆ..?

ದೇವರಾಜೇಗೌಡರ ಜೊತೆ ಮಾತನಾಡಿರುವ ಶಿವರಾಮೇಗೌಡ, ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾನೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕೆಂಬ ಆಸೆ ಇದೆ, ಇವನು ಮುಂದಕ್ಕೆ ಬಂದುಬಟ್ಟನ್ನಲ್ಲ ಅಂತಾ, ಅದಕ್ಕೆ ಮಾಡಿದ್ದಾನೆ ಅಂತಾ ಹೇಳಿ. ದೇವೇಗೌಡ ಹಾಗೂ ದೇವೇಗೌಡ ಮಕ್ಕಳು ಏನು ಕಡಿಮೆ ಅಂದುಕೊಳ್ಳಬೇಡಿ. ಇನ್ನು ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲ್ಲಿಲ್ವಲಾ..?.ಇನ್ನೇನು ವಿಡಿಯೋ ಇದೆ. ಡಿಕೆ ಮಾತನಾಡಿದ್ರು ಬೆಳಗ್ಗೆ, ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನಿವು ತಲೆನೆ ಕೆಡಿಸಿಕೊಳ್ಳಬೇಡಿ. ಅವರನ್ನ ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.

ನೀನೇನು ಪೆನ್ಡ್ರೈವ್‍ನ ನಾಗಮಂಗದಲ್ಲೋ, ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೆ ಹೇಳಿ. ನೀವ್ ಲಾಯರ್ ಅಲ್ವೇನಲ್ವೆನ್ರಿ..ಅದು ಏನು..? ಏನು ಆಗಲ್ಲ ಎಂದು ಶಿವರಾಮೇಗೌಡ ಹೇಳಿದಾಗ, ಅಣ್ಣ ಕಾನೂನು ಪ್ರಕಾರ ಶಿಕ್ಷೆ ಅಲ್ವೇನಣ್ಣ. ಹೆಣ್ಮಕ್ಕಳ ಮಾಣ ಮರ್ಯಾದೆ ಅಣ್ಣ. ಶೀಲದ ಬಗ್ಗೆ ನಾವೂ ಯೋಚನೆ ಮಾಡಬೇಕಲ್ವ ಎಂದು ದೇವರಾಜೇಗೌಡ ಹೇಳುತ್ತಾರೆ. ಈ ವೇಳೆ ಶಿವರಾಮೇಗೌಡ, ಅದರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ತೀರಿ. ಅಮಿತ್ ಶಾ ಚನ್ನೈನಲ್ಲಿ ಹೇಳಿದ್ದಾರಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತ ತಿಳಿಸಿದ್ದಾರೆ.

BREAKING: ಜಮ್ಮು-ಕಾಶ್ಮೀರದ ‘ಪೂಂಚ್’ನಲ್ಲಿ ‘NC Rally’ ವೇಳೆ ಚಾಕು ಇರಿತ, ಮೂವರಿಗೆ ಗಾಯ

ದೇವರಾಜೇಗೌಡ ತಲೆ ಕೆಟ್ಟವನು ಆತನನ್ನು ಆಸ್ಪತ್ರೆಗೆ ಸೇರಿಸಬೇಕು : ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

Share.
Exit mobile version