ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವಂತ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಅಲ್ಲದೇ ಈ ಮೈದಾನದಲ್ಲಿಯೇ ನಾಳೆ ಧ್ವಜಾರೋಹಣವನ್ನು ಮಾಡೋದಾಗಿಯೂ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈದ್ಗಾ ಮೈದಾನದ ಸುತ್ತಮುತ್ತಲು ಪೊಲೀಸ್ ಬಿಗಿಬಂಧೋಬಸ್ತ್ ಕೈಗೊಳ್ಳಲಾಗಿದೆ.

ಭಾರತದಲ್ಲಿ VLC ಮೀಡಿಯಾ ಏಕೆ ನಿಷೇಧಿಸಲಾಗಿದೆ.? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | VLC Player Is Banned In India

ನಾಳೆ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

Shocking News: ಮಡಕೆಯಿಂದ ನೀರು ಕುಡಿದಿದ್ದಕ್ಕೆ ದಲಿತ ಬಾಲಕನನ್ನು ಕೊಂದ ಶಿಕ್ಷಕ

ಈ ಹಿನ್ನಲೆಯಲ್ಲಿ ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಸಾರ್ವಜನಿಕರ ಎಂಟ್ರಿ, ಗಣ್ಯರು ಕೂರುವ ಸ್ಥಳ ಹಾಗೂ ಧ್ವಜಾರೋಹಣಕ್ಕೆ ಮೈದಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

CSA T20 League: ಎಂಎಸ್ ಧೋನಿಯನ್ನು ಮಾರ್ಗದರ್ಶಕರನ್ನಾಗಿ ಬಳಸಲು ಸಿಎಸ್ಕೆಗೆ ಬಿಸಿಸಿಐ ಅವಕಾಶ ನೀಡುವುದಿಲ್ಲ- ವರದಿ

ನಾಳಿನ ಧ್ವಜಾರೋಹಣದ ಬಳಿಕ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ 500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಇಲ್ಲಿ ನಾಳೆ ನಡೆಯುವಂತ ಧ್ವಜಾರೋಹಣದ ವೇಳೆಯಲ್ಲಿ ಭಾರತ ಮಾತಾ ಕೀ ಜೈ ಹಾಗೂ ವಂದೇ ಮಾತರಂ ಘೋಷಣೆಗಳನ್ನು ಮಾತ್ರ ಕೂಗಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಬೇರೆಯಾವುದೇ ಘೋಷಣೆ ಕೂಗಲು ಅನುಮತಿ ಇಲ್ಲ.

Share.
Exit mobile version